ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆಯ ಡೋಸ್​ಗಳನ್ನ ಬೆರೆಸುವುದನ್ನು ಸದ್ಯಕ್ಕೆ ಅನುಸರಿಸುತ್ತಿಲ್ಲಾ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟ ಪಡಿಸಿದೆ.

ಬೆರೆಸಿದ ಲಸಿಕೆಯ ಪರಿಣಾಮಕಾರಿ ಅಂಶಗಳ ಬಗ್ಗೆ ವೈಜ್ಞಾನಿಕ ಆಧಾರಗಳು ಸಿಗುವವರೆಗೂ ಅದರ ಬಳಕೆ ಇರುವುದಿಲ್ಲ. ಅಲ್ಲದೆ ಪ್ರಸ್ತುತ ಲಸಿಕೆ ವಿತರಣೆಯ ವಿಧಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಎಂದಿನಂತೆ ಜನರಿಗೆ ಕೋವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​ ಲಸಿಕೆಯ 2 ಡೋಸ್​ಗಳನ್ನು ಹಾಕಲಾಗುತ್ತೆ ಅಂತಾ ತಿಳಿಸಿದೆ.

ಇತ್ತೀಚೆಗೆ ಉತ್ತರ ಪ್ರದೇಶದ ಸಿದ್ಧಾರ್ಥನಗರದ 20 ಗ್ರಾಮಸ್ಥರಿಗೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ಎರಡೂ ವ್ಯಾಕ್ಸಿನ್​ಗಳನ್ನು ನೀಡಲಾಗಿತ್ತು. ಆದರೆ ಈ ರೀತಿಯ ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗಿಲ್ಲ ಎನ್ನಲಾಗಿದೆ.

The post ಮಿಕ್ಸ್​ ವ್ಯಾಕ್ಸಿನೇಷನ್​​ ಅನುಸರಿಸುತ್ತಿಲ್ಲ.. ವೈಜ್ಞಾನಿಕ ಆಧಾರ ಸಿಗುವವರೆಗೂ ಅದರ ಬಳಕೆ ಇಲ್ಲ- ಕೇಂದ್ರ appeared first on News First Kannada.

Source: newsfirstlive.com

Source link