ಮಿಟ್ಟಹಳ್ಳಿಯಲ್ಲಿ ಮತ್ತೆ ಕೇಳಿ ಬಂತು ಸ್ಫೋಟದ ಸದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಬೀದಿಯಲ್ಲಿ ಕಾಲ ಕಳೆದ ಜನ | Mittahalli people spends night in road over fear of blast sound in chikaballapura


ಮಿಟ್ಟಹಳ್ಳಿಯಲ್ಲಿ ಮತ್ತೆ ಕೇಳಿ ಬಂತು ಸ್ಫೋಟದ ಸದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಬೀದಿಯಲ್ಲಿ ಕಾಲ ಕಳೆದ ಜನ

ಮಿಟ್ಟಹಳ್ಳಿಯಲ್ಲಿ ಮತ್ತೆ ಕೇಳಿ ಬಂತು ಸ್ಫೋಟದ ಸದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಬೀದಿಯಲ್ಲಿ ಕಾಲ ಕಳೆದ ಜನ

ಚಿಕ್ಕಬಳ್ಳಾಫುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಮದಲ್ಲಿ ಮತ್ತೆ ಸ್ಫೋಟದ ಸದ್ದು ಕೇಳಿ ಬಂದಿದ್ದು ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಭಯಭೀತರಾದ ಜನ ರಾತ್ರಿಯಿಡೀ ನಿದ್ದೆ ಮಾಡದೆ ಬೀದಿಯಲ್ಲಿ ಕಾಲ ಕಳೆದಿದ್ದಾರೆ.

ಕಳೆದ ಒಂದು ವಾರದಿಂದ ಭೂಮಿಯಿಂದ ಶಬ್ದ ಬರ್ತಿದೆ. ಈಗಾಗಲೇ ಗ್ರಾಮಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿಫಲ ಕೊಳವೆ ಬಾವಿಗಳಲ್ಲಿ ಜಲ ಮರುಪೊರಣದಿಂದ ಶಬ್ದ ಬರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಫಲ ಕೊಳವೆಬಾವಿಯಲ್ಲಿ ಏರ್ ಬ್ಲಾಸ್ಟ್ ಆಗುತ್ತಿದೆ. ಭಯ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ. ಇನ್ನೂ ಕೆಲವು ದಿನಗಳ ವೆರೆಗೂ ಶಬ್ದ ಬರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದ್ರೆ ಈ ಶಬ್ದದಿಂದ ಜನರಲ್ಲಿರುವ ಆತಂಕ ಕಡಿಮೆಯಾಗಿಲ್ಲ. ಶಬ್ದದಿಂದ ಜನರ ನೆಮ್ಮದಿ ಹಾಳಾಗಿದೆ.

ವಿಜ್ಞಾನಿಗಳು ಬಂದು ತನಿಖೆ ಮಾಡಿ ಸಮಸ್ಯೆ ಬಗೆ ಹರಿದಿದ್ದರೂ ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ನಿನ್ನೆ ರಾತ್ರಿ ಕೇಳಿ ಬಂದ ಶಬ್ದಕ್ಕೆ ನಿದ್ದೆ ಮಾಡದೆ ಗ್ರಾಮಸ್ಥರು ಮನೆ ಹೊರಗೆ ಕಾಲ ಕಳೆದಿದ್ದಾರೆ.

ಬೋರ್ ವೆಲ್​ಗಳಿಂದ  ಏರ್ ಬ್ಲಾಸ್ಟ್ ಆಗುತ್ತಿದೆ
ಮಿಟ್ಟಹಳ್ಳಿ ಹಾಗೂ ಸುತ್ತಮುತ್ತ ಗ್ರಾಮದಲ್ಲಿ ಭೂಕಂಪ ಆಗಿಲ್ಲ. ಭೂಮಾಪನ ಕೇಂದ್ರದಲ್ಲಿ ಎಲ್ಲಿಯೂ ಭೂಕಂಪನ ಮಾಹಿತಿ ದಾಖಲಾಗಿಲ್ಲ. ಗ್ರಾಮದಲ್ಲಿ ಶಬ್ದ ಬಂದಿದೆ ಇದ್ರಿಂದ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಕೆ.ಎಸ್.ಎನ್.ಡಿ.ಎನ್.ಎಂ.ಸಿ. ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಭಯ ಗಾಬರಿ ಪಡಬೇಕಿಲ್ಲ. ಗ್ರಾಮದ ಸುತ್ತಮುತ್ತ 350ಕ್ಕೂ ಹೆಚ್ಚು ಬೋರ್ ವೇಲ್ಗಳಿವೆ. ವಿಫಲ ಕೊಳವೆ ಬಾವಿಗಳಲ್ಲಿ ಜಲ ಮರುಪೂರಣವಾದಾಗ ಶಬ್ದ ಬಂದಿರಬಹುದು. ಏರ್ ಬ್ಲಾಸ್ಟ್ ನಿಂದ ಶಬ್ದ ಬಂದಿರುವ ಬಗ್ಗೆ ಮಾಹಿತಿಯಿದೆ ಎಂದು ಚಿಕ್ಕಬಳ್ಳಾಫುರ ಜಿಲ್ಲಾಧಿಕಾರಿ ಲತಾ ಆರ್ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದ ಮಿಟ್ಟಹಳ್ಳಿಯಲ್ಲಿ ಮತ್ತೆ ಭೂಮಿಯಿಂದ ಬಂತು ಭಾರಿ ಶಬ್ದ!

TV9 Kannada


Leave a Reply

Your email address will not be published. Required fields are marked *