ಮಿತಿಮೀರಿದ ಕೊವಿಡ್ 19; ಹಾಂಗ್​ಕಾಂಗ್​​ಗೆ ವಿಮಾನ ಸಂಚಾರ ರದ್ದುಗೊಳಿಸಿದ ಏರ್​ಇಂಡಿಯಾ ವಿಮಾನಯಾನ ಸಂಸ್ಥೆ | Air India Cancels All Flights to Hong Kong Confirmed by Tweet LXK


ಮಿತಿಮೀರಿದ ಕೊವಿಡ್ 19; ಹಾಂಗ್​ಕಾಂಗ್​​ಗೆ ವಿಮಾನ ಸಂಚಾರ ರದ್ದುಗೊಳಿಸಿದ ಏರ್​ಇಂಡಿಯಾ ವಿಮಾನಯಾನ ಸಂಸ್ಥೆ

ಸಾಂಕೇತಿಕ ಚಿತ್ರ

ಚೀನಾದ ಶಾಂಘೈ, ಹಾಂಗ್​ಕಾಂಗ್​​ಗಳಲ್ಲೆಲ್ಲ ಕೊವಿಡ್​ 19 ಸಿಕ್ಕಾಪಟೆ ಹೆಚ್ಚಿದೆ. ಸ್ಥಳೀಯವಾಗಿ ಕಠಿಣ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ಏರ್​ ಇಂಡಿಯಾ ವಿಮಾನ ಯಾನ ಸಂಸ್ಥೆ, ಹಾಂಗ್​​ಕಾಂಗ್​ಗೆ ಸಂಚಾರ ಮಾಡುತ್ತಿದ್ದ ವಿಮಾನಗಳನ್ನು ರದ್ದುಗೊಳಿಸಿದೆ. ಅಂದರೆ ಮುಂದಿನ ನಿರ್ಣಯದವರೆಗೆ ಹಾಂಗ್​​ಕಾಂಗ್​​ಗೆ ಏರ್​ ಇಂಡಿಯಾದ ಯಾವುದೇ ವಿಮಾನಗಳೂ ಸಂಚಾರ ಮಾಡುವುದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಏರ್​ ಇಂಡಿಯಾ, ಹಾಂಗ್​ಕಾಂಗ್​ನಲ್ಲಿ ಕೊವಿಡ್​ 19 ಪ್ರಕರಣಗಳು ಹೆಚ್ಚಾಗಿರುವ ಕಾರಣ ಅಲ್ಲಿನ ಆಡಳಿತ ಕಠಿಣ ನಿರ್ಬಂಧಗಳನ್ನು ಹೇರಿದೆ.  ಹೀಗಾಗಿ ನಮ್ಮ ವಿಮಾನವೂ ಅಲ್ಲಿಗೆ ಸಂಚಾರ ಮಾಡುವುದಿಲ್ಲ ಎಂದು ಹೇಳಿದೆ.

TV9 Kannada


Leave a Reply

Your email address will not be published. Required fields are marked *