ಮಿಥಾಲಿ ರಾಜ್​ಗೆ ಮತ್ತೊಂದು ಗರಿ: ಱಂಕಿಂಗ್ ಪಟ್ಟಿಯಲ್ಲಿ ನಂಬರ್​ 1 ಸ್ಥಾನ

ಮಿಥಾಲಿ ರಾಜ್​ಗೆ ಮತ್ತೊಂದು ಗರಿ: ಱಂಕಿಂಗ್ ಪಟ್ಟಿಯಲ್ಲಿ ನಂಬರ್​ 1 ಸ್ಥಾನ

ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಒಂದರ ಹಿಂದೊಂದರಂತೆ ಸಾಧನೆಯ ಗರಿಗಳನ್ನ ತಮ್ಮ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಮಹಿಳಾ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಾಧನೆಗೆ ಭಾಜನರಾಗಿದ್ದ ಮಿಥಾಲಿ ರಾಜ್​​ ಅವರು ಇದೀಗ ಎಂಆರ್​ಎಫ್ ವರ್ಲ್ಡ್​ವೈಡ್​ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ಲೇಯರ್​ ಱಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಱಂಕಿಂಗ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಮಹಿಳಾ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ರನ್; ಹೊಸ ದಾಖಲೆ ಬರೆದ ಮಿಥಾಲಿ ರಾಜ್

ಕಳೆದ ವರ್ಷ 5 ನೇ ಸ್ಥಾನದಲ್ಲಿದ್ದ ಮಿಥಾಲಿ ರಾಜ್ 4 ಅದ್ಭುತ ಮಹಿಳಾ ಆಟಗಾರರಿಗೆ ಸೆಡ್ಡು ಹೊಡೆದು 762 ರೇಟಿಂಗ್ ಪಡೆಯುವ ಮೂಲಕ ನಂಬರ್ 1 ಱಂಕಿಂಗ್ ಪಡೆದಿದ್ದಾರೆ. ಇದಷ್ಟೇ ಅಲ್ಲದೆ.. ಕಳೆದ 8 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕೆರಿಯರ್​ನ ಟಾಪ್ 1-0 ಪಟ್ಟಿಯಲ್ಲಿ ಮಿಥಾಲಿ ರಾಜ್ ತಮ್ಮ ಸ್ಥಾನ ಕಾಪಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಿಥಾಲಿ ರಾಜ್ ಮತ್ತೊಂದು ದಾಖಲೆ! ‘ವಿಶ್ವ ಮಹಿಳಾ ಕ್ರಿಕೆಟ್ ರಾಣಿ’ಯ ಸಾಧನೆಗಳ ರೋಚಕ ಜರ್ನಿ

ಎರಡನೇ ಸ್ಥಾನದಲ್ಲಿ 758 ರೇಟಿಂಗ್ ಪಡೆದು ದಕ್ಷಿಣ ಆಫ್ರಿಕಾದ ಲಿಜೆಲ್ಲೆ ಲೀ ಇದ್ದರೆ ಮೂರನೇ ಸ್ಥಾನದಲ್ಲಿ 756 ರೇಟಿಂಗ್ ಪಡೆದು ಆಸ್ಟ್ರೇಲಿಯಾದ ಅಲಿಸ್ಸಾ ಹೇಲಿ ಗುರುತಿಸಿಕೊಂಡಿದ್ದಾರೆ.

The post ಮಿಥಾಲಿ ರಾಜ್​ಗೆ ಮತ್ತೊಂದು ಗರಿ: ಱಂಕಿಂಗ್ ಪಟ್ಟಿಯಲ್ಲಿ ನಂಬರ್​ 1 ಸ್ಥಾನ appeared first on News First Kannada.

Source: newsfirstlive.com

Source link