ಕೆಲ ದಿನಗಳ ಹಿಂದಷ್ಟೇ ಮಿಥುನರಾಶಿ ಸೀರಿಯಲ್ 700 ಎಪಿಸೋಡ್‌ಗಳನ್ನ ಕಂಪ್ಲೀಟ್ ಮಾಡಿದ ಸಂಭ್ರಮದಲ್ಲಿತ್ತು. ಸಹಜವಾಗಿಯೇ ಹೀರೋ ಮಿಥುನ್ ಹಾಗೂ ರಾಶಿಗೆ ಹೆಚ್ಚು ಖುಷಿನೇ ಆಗಿತ್ತು. ಯಾಕಂದ್ರೆ.. ಇದು ಇವರಿಬ್ಬರ ಫಸ್ಟ್‌ ಸೀರಿಯಲ್‌.

ಈ ಸಂಭ್ರಮದ ಬೆನ್ನೆಲ್ಲೇ ಇವರಿಬ್ಬರು ಇನ್ನೊಂದು ಹೊಸ ವೆಂಚರ್ಸ್‌ಗೆ ಕೈಹಾಕಿದ್ದಾರೆ. ಒಂದೇ ಸಮಯದಲ್ಲಿ ಇಬ್ಬರು ಸ್ಯಾಂಡಲ್‌ವುಡ್‌ ಪದಾರ್ಪಣೆ ಮಾಡಿದ್ದಾರೆ. ಇನ್ಮೇಲೆ ಇವರನ್ನ ಬಿಗ್‌ಸ್ಕ್ರೀನ್‌ನಲ್ಲೂ ನೋಡ್ಬಹುದು.

ಬಿಗ್​ ಸ್ಕ್ರೀನ್​ಗೆ ಪದಾರ್ಪಣೆ
ಸ್ವಾಮಿ ಹಾಗೂ ವೈಷ್ಣವಿಯವರಿಗೆ ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಅವಕಾಶ ಸಿಕ್ಕಿದೆ. ಇಬ್ಬರು ಕೂಡಾ ಒಂದೇ ಸಮಯದಲ್ಲಿ ಬಿಗ್​ ಸ್ಕ್ರೀನ್​ಗೆ ಪದಾರ್ಪಣೆ ಮಾಡಿದ್ದಾರೆ. ಆದ್ರೆ ಬೇರೆ ಬೇರೇ ಪ್ರಾಜೆಕ್ಟ್​ನಲ್ಲಿ..

ಇದನ್ನೂ ಓದಿ: ಹೊಸ ಧಾರವಾಹಿಗಾಗಿ ಕಾಯ್ತಿದ್ದೋರಿಗೆ ಇಲ್ಲಿದೆ ಗುಡ್​ ನ್ಯೂಸ್​​ – ಇದೇ ಜು.19ಕ್ಕೆ ನಿಮ್ಮ ಮುಂದೆ ಬರ್ತಿದೆ ಈ ಸೀರಿಯಲ್​!

ಮಿಥುನ್​ ಅಂದ್ರೆ ಸ್ವಾಮಿಯವರು ತಮ್ಮ ಮೊದಲ ಚಿತ್ರದಲ್ಲೇ ಡಾಕ್ಟರ್​ ರೋಲ್​ನಲ್ಲಿ ಮಿಂಚಲಿದ್ದಾರೆ. ಇದೊಂದು ಪ್ಯಾರನಾರ್ಮಲ್​ ಥ್ರಿಲ್ಲರ್​ ಕಥೆಯಾಗಿದ್ದು, ರಿಸರ್ಚ್​ಗಾಗಿ ಹಳ್ಳಿ ಒಂದಕ್ಕೆ ತೆರಳಿದಾಗ.. ಅಲ್ಲಿ ದೆವ್ವ ಭೂತ ಹೀಗೇ ಕೆಲವೊಂದು ಆ್ಯಕ್ಟಿವಿಟಿಗಳು ನಡೀತಾಯಿರುತ್ತವೆ. ಆ ಸಂದರ್ಭದಲ್ಲಿ ಇನ್ನೆರಡು ಟ್ರಾಕ್​ಗಳು ಆ್ಯಡ್​ ಆಗುತ್ತವೆ.. ಇದು ಸ್ವಾಮಿ ಅವರ ಚಿತ್ರದ ಮುಖ್ಯ ಎಳೆಯಾಗಿದೆ.

ಇನ್ನೂ ವಿಶೇಷ ಅಂದ್ರೆ ಸ್ವಾಮಿ ನಟನಾಗಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ, ನಟ ರಾಘವೇಂದ್ರ ರಾಜ್​ಕುಮಾರ್​ ಕೂಡಾ ಒಂದು ಪ್ರಮುಖ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರಕ್ಕೆ ಟೈಟಲ್​ ಇನ್ನೂ ಫಿಕ್ಸ್​ ಆಗಿಲ್ಲ.

ಈ ಚಿತ್ರಕ್ಕೆ ಸೆಲೆಕ್ಷನ್ ಆಗಿದ್ಹೇಗೇ ಅಂತಾ ನ್ಯೂಸ್​ಫಸ್ಟ್​ಗೆ ಸ್ವಾಮಿ ಹೇಳಿದರು. ಈ ಚಿತ್ರದ ಪ್ರೊಡ್ಯೂಸರ್​ ಪವನ್​ ಗೌಡ ನಮ್ಮ ಧಾರವಾಹಿಯನ್ನ ರೆಗ್ಯೂಲರ್​ ಆಗಿ ಫಾಲೋ ಮಾಡುತ್ತಿದ್ದರು. ಹಾಗಾಗಿ ಅವರ ಚಿತ್ರಕ್ಕೆ ನಾನೂ ಸೂಟ್ ಆಗ್ತೀನಿ ಅಂತಾ ನನ್ನನ್ನ ಸಂಪರ್ಕಿಸಿದರು. ನನಗೂ ಕೂಡಾ ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ ಎಂದರು ಸ್ವಾಮಿ​.

ನ್ಯೂ ಗೆಟಪ್​​ನಲ್ಲಿ ವೈಷ್ಣವಿ
ರಾಶಿ ಅಂದ್ರೆ ವೈಷ್ಣವಿ ಅವರು 2020 ಎಂಬ ಚಿತ್ರದಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಕನ್ನಡ ಬಿಗ್​ ಸ್ಕ್ರೀನ್ ಗೆ ಎಂಟ್ರಿ ಕೊಡಲಿದ್ದಾರೆ.. ಈ ಸಿನಿಮಾದ ಟೈಟಲ್​ ನೋಡಿದ್ರೆ ಏನೋ ಹೊಸತನವಿದೆ ಎಂಬುವುದ ಪಕ್ಕಾ ಆಗುತ್ತಿದೆ. ಚಿತ್ರದಲ್ಲಿ ವೈಷ್ಣವಿ ಕೂಡ ಒಂದೊಳ್ಳೆ ರೋಲ್​ ಹಾಗೂ ನ್ಯೂ ಗೆಟ್​ಪ್​ನಲ್ಲಿ ನಿಮ್ಮ ಮುಂದೆ ಬರಲಿದ್ದಾರೆ..

ಕೆ.ಎಲ್.​ರಾಜ್​ಶೇಖರ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಲಿದ್ದು.. ಈ ಮುಂಚೆ ಆಯೋಗ್ಯ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೀಗೇ ಇನ್ನು ಹಲವು ಚಿತ್ರಗಳಿಗೆ ಬಂಡವಾಳ ಹೂಡಿರುವ ಚಂದ್ರಶೇಖರ್​ ಅವರ ಕ್ರಿಸ್ಟೆಲ್​ ಪಾರ್ಕ್ ಬ್ಯಾನರ್​ ಅಡಿಯಲ್ಲಿ 2020 ಸಿನಿಮಾ ಮೂಡಿಬರ್ತಿದೆ. ಒಂದೇ ಧಾರವಾಹಿಯ ನಟ ನಟಿ, ಒಂದೇ ಸಮಯದಲ್ಲಿ ಬಿಗ್​ ಸ್ಕ್ರೀನ್​ಗೆ ಎಂಟ್ರಿ ಕೊಡ್ತಾಯಿರೊದು ಕಾಕತಾಳೀಯ. ಸ್ವಾಮಿ ಹಾಗೂ ವೈಷ್ಣವಿ ಅವರ ಹೊಸ ಪ್ರಾಜೆಕ್ಟ್​ಗೆ ಆಲ್​ ದ ಬೆಸ್ಟ್​.

ಇದನ್ನೂ ಓದಿ: ಸದ್ಯದಲ್ಲೇ ತೆರೆ ಮೇಲೆ ಚಂದನ್ ಹೊಸ ಸೀರಿಯಲ್ –ಪ್ರೋಮೋ ಶೂಟ್​​​ಗೆ ನೂರು ಕಿ.ಮೀ ಓಡಿದ ನಟ

The post ‘ಮಿಥುನ ರಾಶಿ’ಗೆ ಕುದುರಿದ ಲಕ್.. ಬಿಗ್​ಸ್ಕ್ರೀನ್​ಗೆ ಎಂಟ್ರಿ ಕೊಡ್ತಿದ್ದಾರೆ ಸ್ವಾಮಿ & ವೈಷ್ಣವಿ appeared first on News First Kannada.

Source: newsfirstlive.com

Source link