ಚೆನ್ನೈ/ಮುಂಬೈ: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಹಲವು ಜಿಲ್ಲೆಗಳು ಸಂಕಷ್ಟದಲ್ಲಿ ಸಿಲುಕಿವೆ. ತಗ್ಗು ಪ್ರದೇಶಗಳು ಮತ್ತು ನದಿ ಪಾತ್ರದ ಜಿಲ್ಲೆಗಳ ನಿವಾಸಿಗಳು ಪ್ರವಾಹದ ಆತಂಕದಲ್ಲಿ ಸಿಲುಕಿದ್ದಾರೆ.

Image

ಈ ಬಗ್ಗೆ ಮಾಹಿತಿ ನೀಡಿರುವ ರತ್ನಗಿರಿಯ ಜಿಲ್ಲಾಧಿಕಾರಿ ಬಿಎನ್​ ಪಾಟೀಲ್.. ರತ್ನಗಿರಿ ಜಿಲ್ಲೆಯ ಚಿಪ್ಲುನ್ ಸಿಟಿ ಮಳೆಗೆ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ವಶಿಷ್ಟಿ ನದಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, 100ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ ಜನರ ರಕ್ಷಣೆಗಾಗಿ ಎನ್​ಡಿಆರ್​ಎಫ್​, ಕೋಸ್ಟ್​ ಗಾರ್ಡ್​ ಟೀಂ ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯ ನಡೆಯುತ್ತಿದೆ. ಸೇನಾ ಹೆಲಿಕಾಪ್ಟರ್​ ಸಹಾಯದಿಂದ 100ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ.

ನೀರಿನ ಮಧ್ಯೆ ಸಿಲುಕಿಕೊಂಡು ಸಂಪರ್ಕವನ್ನ ಕಡಿತಗೊಂಡಿರುವ ನಿವಾಸಿಗಳಿಗೆ ಆಹಾರ ಸಾಮಗ್ರಿಗಳನ್ನ ತಲುಪಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ನಮ್ಮ 10 ನೌಕಾ ಸೇನಾ ತಂಡ ಕೂಡ ರಕ್ಷಣೆಯಲ್ಲಿ ಭಾಗಿಯಾಗಿದೆ. ಚಿಪ್ಲುನ್ ಪಟ್ಟಣವೊಂದರಲ್ಲೇ ಸುಮಾರು 25,000 ಸಾವಿರ ಮಂದಿ ಇದ್ದಾರೆ. ಕಳೆದ 24 ಗಂಟೆಯಲ್ಲಿ 200 ಮಿಲಿ ಮೀಟರ್ ಮಳೆಯಾಗಿದೆ. ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬ್ರಿಡ್ಜ್​ ಮುಳುಗಡೆಯಾಗಿವೆ, ಕಾಲು ಸಂಕಗಳು ಕೊಚ್ಚಿಕೊಂಡು ಹೋಗಿವೆ ಎಂದು ಮಾಹಿತಿ ನೀಡಿದರು.

ಇನ್ನು ಮಳೆರಾಯ ಅಬ್ಬರಿಸಿ ಬೊಬ್ಬಿರಿದ ಹಿನ್ನೆಲೆಯಲ್ಲಿ ತೆಲಂಗಾಣದ ನಿರ್ಮಲ್ ಮತ್ತಿ ಅದಿಲಾಬಾದ್​ನಲ್ಲಿ ಭಾರೀ ಹಾನಿಯಾಗಿದೆ. ನಿರ್ಮಲ್ ಪಟ್ಟಣದ ಬಹುತೇಕ ಭಾಗ ಜಲಾವೃತಗೊಂಡಿದೆ. ಇನ್ನು ಮುಂಜಾಗೃತ ಕ್ರಮವಾಗಿ ಇಲ್ಲಿನ ಬ್ರಾಹ್ಮಣ್ಸ್​ ಕಾಲೋನಿ, ಗದ್ದೆನ್ನಾ ವಗು ನಿವಾಸಿಗಳನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಇಲ್ಲಿ ಪ್ರವಾಹ ಬಂದಿದ್ದರಿಂದ ಮನೆ-ಮಠಗಳೆಲ್ಲಾ ಕೊಚ್ಚಿಕೊಂಡು ಹೋಗಿವೆ. ಅಲ್ಲದೇ ಇಲ್ಲಿನ ಆಟೋ ನಗರದಲ್ಲಿ 40 ಜನರನ್ನ ರಕ್ಷಣೆ ಮಾಡಲಾಗಿದೆ.

 

The post ಮಿನಿ ಚೀನಾದಂತೆ ಆದ ಪ್ರವಾಹ ಸ್ಥಿತಿ: ಮಹಾರಾಷ್ಟ್ರ, ತೆಲಂಗಾಣದಲ್ಲಿ ಊರುಗಳೇ ಮುಳುಗಡೆ appeared first on News First Kannada.

Source: newsfirstlive.com

Source link