ಮಿಯಾಮಿಯಲ್ಲಿ ಅಕ್ವೇರಿಯಂ ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ದಾಳಿ ಮಾಡಿದ ಡಾಲ್ಫಿನ್; ಇಲ್ಲಿದೆ ವೈರಲ್ ವಿಡಿಯೋ | A dolphin who attacked a trainer during an aquarium show in Miami; Here’s the viral video


ಮಿಯಾಮಿಯಲ್ಲಿ ಅಕ್ವೇರಿಯಂ ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ದಾಳಿ ಮಾಡಿದ ಡಾಲ್ಫಿನ್; ಇಲ್ಲಿದೆ ವೈರಲ್ ವಿಡಿಯೋ

ತರಬೇತುದಾರನ ಮೇಲೆ ಡಾಲ್ಫಿನ್ ದಾಳಿ

ಸಾಗರದಲ್ಲಿ ಡಾಲ್ಫಿನ್‌ (Dolphin) ಗಳು ಅತ್ಯಂತ ವಿಧೇಯ ಜೀವಿಗಳಲ್ಲಿ ಒಂದು ಎನ್ನಲಾಗಿದೆ. ಡಾಲ್ಫಿನ್​ಗಳ ವರ್ತನೆ ಕೆಲವೊಮ್ಮೆ ಸೌಮ್ಯವಾಗಿದ್ದರೆ, ಮತ್ತೆ ಕೆಲವೊಮ್ಮೆ ಅವುಗಳ ದಾಳಿ ಭಯನಕವಾಗಿರುತ್ತೆ. ಆದರೆ ಪ್ರತಿಯೊಂದು ಪ್ರಾಣಿಯು ಶೋಷಣೆಗೆ ಒಳಗಾಗಲು ಒಂದು ಮಿತಿಯನ್ನು ಹೊಂದಿರುತ್ತದೆ. ತನ್ನ ತಾಳ್ಮೆ ಕಳೆದುಕೊಂಡ ಯಾವುದೇ ಪ್ರಾಣಿ ಕೂಡ ಪ್ರತಿದಾಳಿಗೆ ಮುಂದಾಗುತ್ತವೆ. ಪೇಟಾ ಎನ್ನುವ ಟ್ವೀಟರ್ ಖಾತೆಯೂ ಮಿಯಾಮಿ ಸೀಕ್ವೇರಿಯಂನಲ್ಲಿ ತೆಗೆದ ಆಘಾತಕಾರಿ ವಿಡಿಯೋವನ್ನು ಹಂಚಿಕೊಂಡಿದೆ. ಕ್ಲಿಪ್‌ನಲ್ಲಿ, ತರಬೇತುದಾರನು ಪ್ರದರ್ಶನದ ಸಮಯದಲ್ಲಿ ಡಾಲ್ಫಿನ್‌ನಿಂದ ದಾಳಿಗೆ ಒಳಗಾಗುವುದನ್ನು ಕಾಣಬಹುದು. ಆಕೆಯ ದೇಹವನ್ನು ನೀರಿನಲ್ಲಿ ಹಿಂಸಾತ್ಮಕವಾಗಿ ಎಳೆದೆಳೆದು ಒಗೆದಿದ್ದು, ಗಾಯಗೊಂಡ ತರಬೇತುದಾರನನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವಿಡಿಯೋವನ್ನು 3,700 ಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದ್ದು, ಹಲವಾರು ನೆಟಿಗರು ಕೋಪಗೊಂಡು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇಂತಹ ಪ್ರದರ್ಶನಗಳು ಪ್ರಾಣಿ ಹಿಂಸೆಯಲ್ಲದೆ ಮತ್ತೇನಲ್ಲ ಎಂದು ಕೆಲವರು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇಂತಹ ಪ್ರದರ್ಶನಗಳನ್ನು ನಿಷೇಧಿಸಬೇಕು ಎಂದು ಕಮೇಂಟ್ ಮಾಡಿದ್ದಾರೆ. ಅವು ಆಟಿಕೆಗಳಲ್ಲ. ಅವು ಕಾಡು ಪ್ರಾಣಿಗಳು ಎಂದು ಟ್ವೀಟರ್ ಬಳಕೆದಾರರು ಬರೆದಿದ್ದಾರೆ. ನಾವು ಅಂತಹ ಸುಂದರವಾದ ಜೀವಿಗಳನ್ನು ನಿಂದಿಸುವುದು ಮತ್ತು ಹಿಂಸಿಸುತ್ತೇವೆ ಮತ್ತು ನಮ್ಮ ಮನರಂಜನೆಯ 1 ಗಂಟೆಯವರೆಗೆ ಅವರ ಜೀವನದುದ್ದಕ್ಕೂ ಸೆರೆಯಲ್ಲಿ ಇರುವಂತೆ ಒತ್ತಾಯಿಸುವುದು ಎಷ್ಟು ನಾಚಿಕೆಗೇಡಿನ ಸಂಗತಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

TV9 Kannada


Leave a Reply

Your email address will not be published.