1/6
1. ಬ್ರಿಟನ್ (Briton and Cat):
ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರಚಲಿತದಲ್ಲಿರುವ ಅಂಧ ವಿಶ್ವಾಸದ ಪ್ರಕಾರ ಮದುವೆಯ ದಿನ ಕಪ್ಪು ಬೆಕ್ಕನ್ನು ವಧುಗೆ ಕಾಣಿಕೆಯಾಗಿ ನೀಡುವುದು ಸೌಭಾಗ್ಯದಾಯಕ ಎಂದು ಪರಿಗಣಿಸುತ್ತಾರೆ. ನವವಿವಾಹಿತರ ಮನೆಯಲ್ಲಿ ಒಂದು ಬೆಕ್ಕು ಇದ್ದರೆ ಅದು ಕೆಟ್ಟದ್ದನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ. ಕರಿ ಬೆಕ್ಕು ಅಂದರೆ ಬ್ರಿಟಿಷರಿಗೆ ಭಾಗ್ಯಶಾಲಿಯಂತೆ! ಅಲ್ಲಿಯ ಜನ ತಮ್ಮ ಮನೆಯಲ್ಲಿ ಅದನ್ನು ‘ಪುಸ್ಸಿ ಕ್ಯಾಟ್, ಪುಸ್ಸಿ ಕ್ಯಾಟ್! ವೇರ್ ಹ್ಯಾಡ್ ಯು ಬೀನ್‘ ಎಂದು ಪದ್ಯ ಕಟ್ಟಿ ಮುದ್ದುಮಾಡುವುದೂ ಉಂಟು (black cat as good omen).
2/6
2. ಜಪಾನ್ (Japan and Cat):
ಜಪಾನ್ ದೇಶದಲ್ಲಿ ಕಪ್ಪು ಬಣ್ಣದ್ದೇ ಆಗಲಿ ಅಥವಾ ಅಚ್ಚ ಬಿಳುಪಿನ ಬೆಕ್ಕನ್ನೇ ಆಗಲೀ ಶುಭ ಎಂದು ಕಾಣುತ್ತಾರೆ. ಸಮೃದ್ಧಿ ಮತ್ತು ಸೌಭಾಗ್ಯವೆಂದು ಪರಿಗಣಿಸುತ್ತಾರೆ. ಕೆಟ್ಟದ್ದನ್ನು ದೂರ ಮಾಡಿಬಿಡುತ್ತದೆ ಎಂದು ಬಗೆಯುತ್ತಾರೆ. ಜಪಾನೀಯರ ಪ್ರಕಾರ ಅದು ಪ್ರೀತಿಯ ಪ್ರತೀಕ ಮತ್ತು ಸಂತಾನೋತ್ಪತ್ತಿಯ ಸಂಕೇತ.
3/6
3. ಫ್ರಾನ್ಸ್ (France and Cat):
ಫ್ರಾನ್ಸ್ನಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆಯ ಪ್ರಕಾರ ಕಪ್ಪು ಬೆಕ್ಕಿಗೆ ಸರಿಯಾದ ರೀತಿಯಲ್ಲಿ ಉಣಬಡಿಸಿದ್ದೇ ಆದರೆ ಅದು ಸೌಭಾಗ್ಯವೆಂದು ಹೇಳುತ್ತಾರೆ.
4/6
ಸ್ಕಾಟ್ಲೆಂಡ್ (Scotland and Cat):
ಸ್ಕಾಟ್ಲೆಂಡ್ ದೇಶದವರಲ್ಲಿ ಈ ಮೂಢನಂಬಿಕೆ ಇನ್ನೂ ಒಂದು ತೂಕ ಹೆಚ್ಚೇ ಇದೆ. ಸ್ಕಾಟ್ಲೆಂಡ್ನಲ್ಲಿ ಯಾರದಾದರೂ ಮನೆಗಳಿಗೆ ಬೆಕ್ಕು ನುಗ್ಗಿದ್ದೇ ಆದರೆ, ಬಣ್ಣ ಯಾವುದೇ ಆದರೂ ಪರವಾಗಿಲ್ಲ, ಅದು ಶುಭದಾಯಕವಾಗಿದ್ದು, ಧನ ಮನೆಯೊಳಗೆ ಪ್ರವೇಶಿಸಲು ಸಿದ್ಧವಾಗಿಯೇ ಇದೆ ಎಂದು ‘ಅರ್ಥ’.
5/6
ನಾರ್ವೆ (Norway and Cat): ನಾರ್ವೆಯ ಪರಾಣ ಕತೆಗಳ ಪ್ರಕಾರ ಕರಿ ಬೆಕ್ಕುಗಳು ಪ್ರೀತಿಯ ಪ್ರತೀಕವಂತೆ. ಅದು ಸಂತಾನೋತ್ಪತ್ತಿಯ ಸಂಕೇತ ಎನ್ನುತ್ತಾರೆ. ಇದಕ್ಕೆ ಕಾರಣವೂ ಇಂಟರೆಸ್ಟಿಂಗ್ ಆಗಿದೆ. ಏನೆಂದರೆ ನಾರ್ವೆಯ ಪರಾಣ ಕತೆಗಳ ಲ್ಲಿ ಬರುವ ಫ್ರೀಜಾ (Freja) ಎಂಬ ಪ್ರೇಮದ ಅಧಿದೇವತೆಯ ರಥವನ್ನು ಎಳೆಯುವುದು ಇದೇ ಬೆಕ್ಕುಗಳು!
6/6
ಈಜಿಪ್ಟ್ (Egypt and Cat):
ಅಪಾರ ನಂಬಿಕೆಗಳ ದೇಶವಾದ ಈಜಿಪ್ಟ್ನಲ್ಲಿ ಬೆಕ್ಕುಗಳನ್ನು ಭಗವಂತನ ಸ್ವರೂಪ ಎಂದು ಪೂಜಿಸುತ್ತಾರೆ. ಸುಂದರ, ಸ್ನೇಹಮಯ ಮತ್ತು ಬುದ್ಧಿಮತ್ತೆಯ ಸಂಕೇತದ್ದೆಂದು ಹೇಳುತ್ತಾರೆ. ಅಕಸ್ಮಾತ್ ಮನೆಗಳಲ್ಲಿ ಕರಿ ಬೆಕ್ಕು ಸತ್ತು ಹೋದರೆ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿಬಿಡುತ್ತದೆ.