‘ಮಿರ್ಜಾಪುರ್​’ ಖ್ಯಾತಿಯ ನಟನ ಅನುಮಾನಾಸ್ಪದ ಸಾವು; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ | Mirzapur Fame Bramha Mishra aka Lalit died semi decomposed body found in Home


‘ಮಿರ್ಜಾಪುರ್​’ ಖ್ಯಾತಿಯ ನಟನ ಅನುಮಾನಾಸ್ಪದ ಸಾವು; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಬ್ರಹ್ಮ ಮಿಶ್ರಾ

ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆದ ‘ಮಿರ್ಜಾಪುರ್​’ ವೆಬ್​ ಸರಣಿ ಸಾಕಷ್ಟು ಖ್ಯಾತಿ ಗಳಿಸಿತ್ತು. ಈಗಾಗಲೇ ಎರಡು ಸೀಸನ್​ ತೆರೆಕಂಡಿದ್ದು, ಎರಡೂ ಹಿಟ್​ ಆಗಿದೆ. ಈ ಸರಣಿಯಲ್ಲಿ ಲಲಿತ್ ಹೆಸರಿನ ಪಾತ್ರ ಮಾಡಿದ್ದ ಬ್ರಹ್ಮ ಮಿಶ್ರಾ ನಿಧನ ಹೊಂದಿದ್ದಾರೆ. ಮುಂಬೈನ ಅವರ ಮನೆಯಲ್ಲೇ ಮೃತಪಟ್ಟಿದ್ದಾರೆ. ಅವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  

ಬ್ರಹ್ಮ ಮಿಶ್ರಾ ಅವರಿಗೆ 36 ವರ್ಷ ವಯಸ್ಸಾಗಿತ್ತು. ನವೆಂಬರ್​ 29ರಂದು ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿತ್ತು. ನಂತರ ಅವರ ಮನೆಗೆ ವೈದ್ಯರು ಬಂದು ಹೋಗಿದ್ದರು. ಆ ಬಳಿಕ ಅವರು ಮನೆಯಿಂದ ಹೊರ ಬಂದಿರಲಿಲ್ಲ. ಈಗ ಬ್ರಹ್ಮ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಆದರೆ, ಈ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಅನುಮಾನ ಕಂಡು ಬಂದರೆ ಪೊಲೀಸರು ತನಿಖೆ ನಡೆಸಲಿದ್ದಾರೆ.

ಮನೆಯ ಬಾತ್​ರೂಮ್​ನಲ್ಲಿ ಬ್ರಹ್ಮ ಅವರ ದೇಹ ಪತ್ತೆ ಆಗಿದೆ. ಮೂರು ದಿನಗಳ ಹಿಂದೆಯೇ ಅವರು ಮೃತಪಟ್ಟಿದ್ದಾರೆ. ಅವರ ಮನೆಯಿಂದ ಕೊಳೆತ ವಾಸನೆ ಬರುತ್ತಿರುವ ಬಗ್ಗೆ ಅಕ್ಕ-ಪಕ್ಕದ ಮನೆಯವರು ದೂರು ನೀಡಿದ್ದರು. ಪೊಲೀಸರು ಬಂದು ಮನೆ ಪ್ರವೇಶಿಸಿದಾಗ ಬ್ರಹ್ಮ ಮೃತಪಟ್ಟಿರುವ ವಿಚಾರ ಗೊತ್ತಾಗಿದೆ. ‘ಮಿರ್ಜಾಪುರ್​’ನಲ್ಲಿ ಮುನ್ನಾ ಭಯ್ಯಾ ಅವರ ರೈಟ್​ ಹ್ಯಾಂಡ್​ ಆಗಿ ಲಲಿತ್​ ಪಾತ್ರ ಇತ್ತು. ಎರಡನೇ ಸೀಸನ್​​ನಲ್ಲಿ ಲಲಿತ್​ ಪಾತ್ರ ಅಂತ್ಯವಾಗಿದೆ.

ಬ್ರಹ್ಮ ಅವರ ಸಹೋದರ ಸಂದೀಪ್​ ಮಿಶ್ರಾ ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ವಾಸವಾಗಿದ್ದಾರೆ. ಈ ಘಟನೆ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಅವರು ಮುಂಬೈಗೆ ತೆರಳಿದ್ದಾರೆ.  ಮಿರ್ಜಾಪುರ್​ ಕಲಾವಿದರು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ಮಿರ್ಜಾಪುರ್​’ ಮಾತ್ರವಲ್ಲದೆ ‘ದಂಗಲ್’, ‘ದಿ ಮೌಂಟೇನ್​ ಮ್ಯಾನ್​’, ‘ಬದ್ರಿನಾಥ್​ ಕಿ ದುಲ್ಹನಿಯಾ’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.

TV9 Kannada


Leave a Reply

Your email address will not be published. Required fields are marked *