ನವದೆಹಲಿ: ಕೊರೊನಾ ಸೋಂಕಿನಿಂದಾಗಿ ಮಹಿಳಾ ವಾಲಿಬಾಲ್ ಟೀಮ್​ನ ಮಾಜಿ ಕ್ಯಾಪ್ಟನ್ ಮತ್ತು ಮಾಜಿ ಅಥ್ಲಿಟ್ ಮಿಲ್ಕಾ ಸಿಂಗ್ ಅವರ ಪತ್ನಿ ನಿರ್ಮಲ್ ಕೌರ್ ಕೊನೆಯುಸಿರೆಳೆದಿದ್ದಾರೆ. ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿರ್ಮಲಾ ಕೌರ್ ಚಿಕಿತ್ಸೆ ಪಡೆಯುತ್ತಿದ್ದರು.

ಮಿಲ್ಕಾ ಸಿಂಗ್ ಅವರೂ ಸಹ ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು ಪತ್ನಿ ನಿರ್ಮಲ್ ಕೌರ್ ಮಿಲ್ಕಾ ಸಿಂಗ್ ಅವರ ಆರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು, ನಿರ್ಮಲ್ ಕೌರ್ ಅವರ ಸಾವಿಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ ದಿಗ್ಗಜ, ‘ಫ್ಲೈಯಿಂಗ್ ಸಿಖ್’ ಮಿಲ್ಕಾ ಸಿಂಗ್​ಗೆ ಕೊರೊನಾ ಪಾಸಿಟಿವ್

ನಿರ್ಮಲ್ ಕೌರ್ ಸಿಂಗ್ ಅವರು ಕೊರೊನಾದಿಂದಾಗಿ ಸಾವನ್ನಪ್ಪಿದ ವಿಚಾರ ಬೇಸರ ತಂದಿದೆ. ಅವರು ವಾಲಿಬಾಲ್​ ಟೀಮ್​ನ ಕ್ಯಾಪ್ಟನ್​ ಆಗಿ ಕ್ರೀಡಾ ಸ್ಫೂರ್ತಿ ಮೆರೆದಿದ್ದವರು. ಅವರ ಕುಟುಂಬ ಮತ್ತು ಸ್ನೇಹ ಬಳಗಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.

The post ಮಿಲ್ಕಾ ಸಿಂಗ್ ಪತ್ನಿ ನಿರ್ಮಲ್ ಕೌರ್ ಕೊರೊನಾದಿಂದ ವಿಧಿವಶ appeared first on News First Kannada.

Source: newsfirstlive.com

Source link