ಮಿಸೆಸ್​ ವರ್ಲ್ಡ್​​​​ 2022ನಲ್ಲಿ ಭಾರತವನ್ನು ಪ್ರತಿನಿಧಿಸಿದ ನವದೀಪ್​ ಕೌರ್ ಯಾರು? | Navdeep Kaur who is representative India at Mrs World 2022


ಮಿಸೆಸ್​ ವರ್ಲ್ಡ್​​​​ 2022ನಲ್ಲಿ ಭಾರತವನ್ನು ಪ್ರತಿನಿಧಿಸಿದ ನವದೀಪ್​ ಕೌರ್ ಯಾರು?

ನವದೀಪ್​

‘ಮಿಸ್​ ವರ್ಲ್ಡ್​ ಚಾಂಪಿಯನ್​ಶಿಪ್’​ (Miss World) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ವೇದಿಕೆ ಮೇಲೆ ಹೆಜ್ಜೆ ಹಾಕಿ, ನಂತರ ಆಯೋಜಕರು ಕೇಳುವ ಪ್ರಶ್ನೆಗೆ ಚಾಕಚಕ್ಯತೆಯಿಂದ ಉತ್ತರ ಹೇಳಿ, ಯಾರು ಅದ್ಭುತವಾಗಿ ಉತ್ತರ ನೀಡುತ್ತಾರೋ ಅವರು ಕಿರೀಟ ಗೆಲ್ಲುತ್ತಾರೆ. ಅದೇ ರೀತಿಯಲ್ಲಿ ‘ಮಿಸಸ್​ ವರ್ಲ್ಡ್​’ ಚಾಂಪಿಯನ್​ಶಿಪ್​ (Mrs World 2022) ನಡೆದಿದೆ. 2022ರ ಸ್ಪರ್ಧೆ ಅಮೆರಿಕದ ಲಾಸ್​ ವೇಗಾಸ್​ನಲ್ಲಿ ನಡೆದಿದೆ. ಈ ಸ್ಪರ್ಧೆಗೆ ಭಾರತವನ್ನು ನವದೀಪ್​ ಕೌರ್ (Navdeep Kaur)​ ಅವರು ಪ್ರತಿನಿಧಿಸಿ, ಬೆಸ್ಟ್​ ನ್ಯಾಷನಲ್​ ಕಾಸ್ಟ್ಯೂಮ್​​ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಮಿಸಸ್​ ಇಂಡಿಯಾ ವರ್ಲ್ಡ್​ನಲ್ಲಿ ಗೆದ್ದ ಬಳಿಕ ನವದೀಪ್​ ಹೆಚ್ಚು ಸುದ್ದಿಯಾದರು. ಅವರು ಯಾವುದೋ ದೊಡ್ಡ ನಗರದಿಂದ ಬಂದವರಲ್ಲ. ನವದೀಪ್ ಒಡಿಶಾ ರಾಜ್ಯದ ಚಿಕ್ಕ ಹಳ್ಳಿಯವರು. ಆದರೆ, ಸಾಕಷ್ಟು ವಿಚಾರಗಳು ಇವರ ಮೇಲೆ ಪ್ರಭಾವ ಬೀರಿದವು. ಹೀಗಾಗಿ, ನವದೀಪ್​ ಅವರು ಫ್ಯಾಷನ್​ ಲೋಕದತ್ತ ಹೆಚ್ಚು ಒಲವು ತೋರಿದರು. ನವದೀಪ್​ ಕಂಪ್ಯೂಟರ್​ ಸೈನ್ಸ್​ ಎಂಜಿನಿಯರಿಂಗ್​ ಒಂದಿದ್ದಾರೆ. ಅದಾದ ಬಳಿಕ ಎಂಬಿಎ ಪದವಿ ಪಡೆದರು. ಬ್ಯಾಂಕ್​ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಸಹಾಯಕ ಪ್ರಾಧ್ಯಾಪಕರಾಗಿಯೂ ಅವರು ಸೇವೆ ಸಲ್ಲಿಸಿದರು.

ನವದೀಪ್​ ಅವರು ಕೇವಲ ಫ್ಯಾಷನ್​ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲ. ಅವರಲ್ಲಿ ಸಮಾಜಸೇವೆ ಸಲ್ಲಿಸುವ ಗುಣ ಕೂಡ ಇದೆ. ಕೆಲ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಅವರು ಸುಮಾರು 1000 ವಿದ್ಯಾರ್ಥಿನಿಯರ ಶಿಕ್ಷಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂದು ವರದಿ ಆಗಿದೆ. ಅವರು ಬಡವರ್ಗದ ಮಕ್ಕಳಿಗೆ ಶಿಕ್ಷಣ ನೀಡಲು ಪ್ರತಿ ತಿಂಗಳಲ್ಲಿ ಕೆಲವು ದಿನಗಳನ್ನು ಮೀಸಲಿಡುತ್ತಾರೆ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ತರಗತಿಗಳನ್ನು ಅವರು ನಡೆಸುತ್ತಾರೆ.

ಒಡಿಶಾ ಬೈಟ್ಸ್​ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನವ​ದೀಪ್​, ಇದು ನನ್ನ ವೃತ್ತಿಯಾಗಿರಲಿಲ್ಲ. ಹಾಗಾಗಿ, ಸಿದ್ಧತೆ ಎನ್ನುವ ವಿಚಾರ ಬಂದಾಗ ಪ್ರತಿಯೊಂದು ವಿಚಾರವನ್ನೂ ತಿಳಿದುಕೊಳ್ಳುತ್ತೇನೆ. 20 ವರ್ಷಗಳ ಅನುಭವ ಹೊಂದಿರುವ ಅಂತರಾಷ್ಟ್ರೀಯ ತರಬೇತುದಾರರ ಮಾರ್ಗದರ್ಶನದಲ್ಲಿ ನಾನು ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ .

TV9 Kannada


Leave a Reply

Your email address will not be published. Required fields are marked *