ನಟಿ ಪೂಜಾ ಗಾಂಧಿ ತಮ್ಮ ಚೊಚ್ಚಲ ಚಿತ್ರ "ಮುಂಗಾರು ಮಳೆ" ಜತೆಗೆ ಕನ್ನಡಿಗರ ಮನೆ ಮಾತಾಗಿದ್ದರು. ನಂತರ, ನಿರ್ದೇಶಕ ಶ್ರೀನಿವಾಸ್ ರಾಜು ಅವರ "ದಂಡುಪಾಳ್ಯ" ಸರಣಿಗಳಲ್ಲಿ ಅವರ ದಿಟ್ಟ ಪಾತ್ರದೊಂದಿಗೆ, ಅವರು ಮತ್ತೆ ಖ್ಯಾತಿಗೆ ಏರಿದರು. ಈಗ ಪೂಜಾ ಗಾಂಧಿ ಮತ್ತು ಶ್ರೀನಿವಾಸ್ ರಾಜು ಮತ್ತೆ ಹೊಸ ಯೋಜನೆಗಾಗಿ ಒಟ್ಟಾಗುತ್ತಿದ್ದಾರೆ.

ಚಿತ್ರದ ಶೇಕಡಾ 50 ರಷ್ಟು ಚಿತ್ರೀಕರಣ ಈಗಾಗಲೇ ಆಗಿದ್ದರೂ, ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆ ವಿವರಗಳನ್ನು ಬಹಿರಂಗಪಡಿಸಿಲ್ಲ.ಪೂಜಾ ಗಾಂಧಿ ಸೇರಿದಂತೆ ಎಲ್ಲ ನಟರು ಈ ಕುರಿತು ಮಾತನಾಡದಿರುವ ಕಾರಣ ಚಿತ್ರದ ಪಾತ್ರವರ್ಗ ಮತ್ತು ಕಥಾವಸ್ತುವಿನ ಕುರಿತು ಯಾವ ವಿವರವೂ ಲಭ್ಯವಿಲ್ಲ. ಆದರೆ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.

ಹಾಗಿದ್ದರೂ ಶ್ರೀನಿವಾಸ್-ಪೂಜಾ ಗಾಂಧಿ ಕೋಡಿಯ ಹೊಸ ಸಿನಿಮಾ ಒಂದು ಕೊಲೆ ರಹಸ್ಯದ ಕಥಾನಕವೆಂದು ಸಿನಿಮಾ ಎಕ್ಸ್ ಪ್ರೆಸ್ ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಈ ಚಿತ್ರ ಅನೇಕ ಭಾಷೆಗಳಲ್ಲಿ ತಯಾರಾಗುತ್ತಿದೆ ಎಂದು ತಿಳಿದುಬಂದಿದೆ. ಪೂಜಾ ಶೀಘ್ರದಲ್ಲೇ ಸೆಟ್‌ಗೆ ಆಗಮಿಸುವ ನಿರೀಕ್ಷೆಯಿದೆ.

2018 ರಲ್ಲಿ "ದಂಡುಪಾಳ್ಯ 3" ಬಿಡುಗಡೆಯಾದ ನಂತರ ಪೂಜಾ ಗಾಂಧಿ ನಟನೆಯಿಂದ ವಿರಾಮ ತೆಗೆದುಕೊಂಡರು. ಮಾರ್ಚ್ 2019 ರಲ್ಲಿ "ಸಂಹಾರಿಣಿ" ಚಿತ್ರವನ್ನು ಕೈಗೆತ್ತಿಕೊಳ್ಳುವ ಮೂಲಕ ಅವರು ಮತ್ತೆ ಸಕ್ರಿಯವಾಗಿದ್ದರು.. ಕೆ ಜವಾಹರ್ ನಿರ್ದೇಶನದ, ಚಿತ್ರದ ಚಿತ್ರೀಕರಣ ಮುಗಿದಿದ್ದು ಪ್ರಸ್ತುತ ಇದು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More