ಮಿಸ್ಡ್​ ಕಾಲ್​ ದೋಖಾ; ಮಾಯಾಂಗನೆ ಮುದ್ದಾದ ಮಾತು ಕೇಳಿದವ ಕಳೆದುಕೊಂಡ ಹಣ ಎಷ್ಟು ಗೊತ್ತಾ?


ಬೆಂಗಳೂರು: ಹನಿಟ್ರ್ಯಾಪ್​ ಮೂಲಕ ಅಮಾಯಕರನ್ನು ವಂಚಿಸುತ್ತಿದ್ದ ಖತರ್ನಾಕ್​ ಗ್ಯಾಂಗ್​ ಒಂದರ ಮೇನ್​ ಕಿಂಗ್​ಪಿನ್​ ಮೊಹಮ್ಮದ್ ಎಂಬಾತನನ್ನು ಗೋವಿಂದಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮಧ್ಯವಯಸ್ಕರು, ಅವಿವಾಹಿತರು ಹಾಗೂ ವಿಚ್ಛೇಧಿತರನ್ನು ಟಾರ್ಗೆಟ್ ಮಾಡ್ತಿದ್ದ ಗ್ಯಾಂಗ್​ ಮೊದಲಿಗೆ ಫೋನ್​​ನಲ್ಲಿ ಮಿಸ್ ಕಾಲ್ ಕೊಟ್ಟು ಸಂಪರ್ಕ ಬೆಳೆಸ್ತಿದ್ದರಂತೆ. ಅದೇ ರೀತಿ ನಗರದ ಖಾಸಗಿ ಬ್ಯಾಂಕ್​ ಉದ್ಯೋಗಿಯನ್ನು ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದಾರೆ.

ವಾಟ್ಸಾಪ್​ನಲ್ಲಿ ರಿಪ್ಲೆ ಬರ್ತಿದ್ದಂಗೆ ಗೇಮ್​ ಸ್ಟಾರ್ಟ್​!

ಆರೋಪಿಗಳು ಮೊದಲು ಮಿಸ್​ಕಾಲ್​ ಕೊಡ್ತಿದ್ದರಂತೆ, ಬಳಿಕ ವಾಟ್ಸ್ ಆಪ್ ನಲ್ಲಿ ಹಾಯ್ ಅಂತಿದ್ದರಂತೆ. ವಾಟ್ಸಾಪ್​ನಲ್ಲಿ ರಿಪ್ಲೇ ಬರ್ತಿದ್ದೆ ತಡ ವಂಚನೆ ಮಾಡಲು ಪ್ಲಾನ್​ ರೂಪಿಸುತ್ತಿದ್ದರಂತೆ. ಹೀಗೆ ಮಾರತ್ತಹಳ್ಳಿಯ ಐವತ್ತು ವರ್ಷದ ವ್ಯಕ್ತಿಗೆ ಯುವತಿ ಹೆಸರಲ್ಲಿ ವಾಟ್ಸಾಪ್​ನಲ್ಲಿ ಮೆಸೇಜ್ ಮಾಡಿದ್ದ ಆರೋಪಿಗಳು ನಾರ್ಥ್ ಇಂಡಿಯಾ ಅಂತ ಪರಿಚಯ ಮಾಡ್ಕೊಳ್ತಿದ್ರು. ಬೆಂಗಳೂರಿಗೆ ಬಂದಾಗ ಮೀಟ್ ಆಗ್ತಿನಿ ಅಂತ ಸ್ನೇಹ ಬೆಳಸ್ತಿದ್ರಂತೆ.

ಇದೇ ರೀತಿ ಕಳೆದ ಅಕ್ಟೋಬರ್ 10 ರಂದು ಯುವತಿಯೊಬ್ಬಳ ಕಡೆಯಿಂದ ವಂಚನೆಗೊಳಗಾದ ವ್ಯಕ್ತಿಗೆ ಕರೆ ಮಾಡಿಸಿ ಬೆಂಗಳೂರಿಗೆ ಬಂದಿರೋದಾಗಿ ತಿಳಿಸಿದ್ರು. ಮತ್ತು ಮೀಟ್ ಆಗೀದಾಗಿ ಟೈಂ ಫಿಕ್ಸ್​ ಮಾಡಿದ್ರು. ಇನ್ನು ಮಾಯಾಂಗನೆಯ ಮುದ್ದಾದ ಮಾತುಗಳಿಗೆ ಮಾರುಹೋದ ವ್ಯಕ್ತಿ ಭೇಟಿ ಮಾಡಲು ರಾತ್ರಿ ವೇಳೆ ವೀರಣ್ಣಪಾಳ್ಯದ ಹೋಟೆಲ್ ಗೆ ಬಂದಿದ್ದಾರೆ.

ಪೊಲೀಸರ ಗೆಟಪ್ಪಲ್ಲಿ ಎಂಟ್ರಿ ಕೊಟ್ಟ ವಂಚಕರು!

ಹೋಟೆಲ್​ಗೆ ತೆರಳ್ತಿದ್ದಂತೆ ಓರ್ವ ಯುವತಿ ಸಲುಗೆಯಿಂದ ಮಾತಾಡಲು ಆರಂಭಿಸಿದ್ಲು. ಈ ವೇಳೆ ರೂಂ ಗೆ ಪೊಲೀಸರ ಹೆಸರಲ್ಲಿ ಎಂಟ್ರಿಕೊಟ್ಟಿರೋ ಆರೋಪಿಗಳು ನಾವು ಪೊಲೀಸರು ನೀನು ಡ್ರಗ್ ಮಾರ್ತಿದ್ದೀಯಾ ಅನ್ನೊ ಇನ್ಫರ್ಮೇಶನ್ ಇದೆ ಅಂತ ಅವಾಜ್ ಹಾಕಿದ್ದರು ಎನ್ನಲಾಗಿದೆ. ಇದರಿಂದ ವ್ಯಕ್ತಿ ಗಲಿಬಿಲಿಗೊಂಡಿದ್ದಾನೆ ಆಗ ಆತನ ಮೊಬೈಲ್​ ಕಸಿದುಕೊಂಡು ಬ್ಯಾಂಕ್​ ಜೊತೆ ಲಿಂಕ್​ ಆಗಿರೋ ಅಕೌಂಟ್​ಗಳನ್ನ ಪರಿಶೀಲನೆ ಮಾಡಿದ್ದಾರೆ.

ಯುಪಿಐ ಪೇಮೆಂಟ್​ ಮೂಲಕ ಬರೋಬ್ಬರಿ ವ್ಯಕ್ತಿಯ 3 ಅಕೌಂಟ್ ಗಳಿಂದ 5 ಲಕ್ಷ 91 ಸಾವಿರ ಹಣವನ್ನು ಆರೋಪಿಗಳು ವರ್ಗಾಯಿಸಿಕೊಂಡಿದ್ದಾರೆ. ನಂತರ ಹೋಟೆಲ್ ರೂಂ ನಲ್ಲಿ ಕೂಡಿಹಾಕಿ ಎಸ್ಕೇಪ್ ಆಗಿದ್ದಾರೆ.

ವಂಚನೆಗೊಳಾದ ವ್ಯಕ್ತಿ ಸದ್ಯ ಪ್ರಕರಣ ಸಂಬಂಧ ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ನಂತರ ಆರೋಪಿಗಳ ಪತ್ತೆಗೆ ಇಳಿದ ಪೊಲೀಸರು ಓರ್ವನನ್ನು ಬಂಧಿಸಿ ಎಸ್ಕೇಪ್ ಆಗಿರುವ ಓರ್ವ ಯುವತಿ ಹಾಗೂ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

News First Live Kannada


Leave a Reply

Your email address will not be published. Required fields are marked *