ಉಡುಪಿ: ಹಳೆಯ ಕಾಲದ ಮೂಕಾಂಬಿಕಾ ದೇವಿಯ ಪುರಾತನ ವಿಗ್ರಹವೊಂದು ಉಡುಪಿಯ ಉದ್ಯಾವರದ ಬೊಳ್ಜೆ ನದಿಯಲ್ಲಿ ಸ್ಥಳೀಯ ಮೀನುಗಾರರ ಬಲೆಯಲ್ಲಿ ಸಿಲುಕಿದೆ.

ಪುರಾತನ ವಿಗ್ರಹವನ್ನ ನೋಡಿ ಆಶ್ಚರ್ಯಕ್ಕೆ ಒಳಗಾದ ಮೀನುಗಾರರು ನಂತರದ ಅದನ್ನು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಅರ್ಚಕರಿಗೆ ಒಪ್ಪಿಸಿದ್ದಾರೆ. ನೂರಾರು ವರ್ಷ ಹಿಂದಿನ ಮೂರ್ತಿ ಇದಾಗಿದ್ದು, ಹಲವಾರು ಸಮಯಗಳಿಂದ ಈ ಮೂರ್ತಿಯು ಉತ್ತಮ ಗುಣಮಟ್ಟದಲ್ಲಿದ್ದು, ಪಂಚಲೋಹಗಳಿಂದ ನಿರ್ಮಿಸಲ್ಪಟ್ಟಿದೆ.

ದೇವಸ್ಥಾನಗಳಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ಹಳೆ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಿರುವ ಸಾಧ್ಯತೆ ಇದೆ. ಈ ಮೂರ್ತಿ ಮುಂದೇನು ಮಾಡುವುದೆಂದು ತೀರ್ಮಾನಿಸಲಿದ್ದೇವೆ ಎಂದು ಅರ್ಚಕ ರಾಘವೇಂದ್ರ ಉಪಾಧ್ಯಾಯರು ತಿಳಿಸಿದ್ದಾರೆ.

The post ಮೀನುಗಾರರಿಗೆ ಒಲಿದ ದೇವಿ.. ಪುರಾತನ ಕಾಲದ ಮೂಕಾಂಬಿಕಾ ದೇವಿಯ ವಿಗ್ರಹ ಪತ್ತೆ appeared first on News First Kannada.

Source: newsfirstlive.com

Source link