ಕಾರವಾರ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆಯಾಗಿ ಓರ್ವ ಮೀನುಗಾರ ನಾಪತ್ತೆಯಾಗಿರೋ ಘಟನೆ ಹೊನ್ನಾವರದ ಕಾಸರಕೋಡು ಇಕೋ ಬೀಚ್‌ನಲ್ಲಿ ನಡೆದಿದೆ. ಇದೇ ವೇಳೆ ಅಪಾಯಕ್ಕೆ ಸಿಲುಕಿದ್ದ ಮೂವರನ್ನ ರಕ್ಷಣೆ ಮಾಡಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಉದಯ ದಾಮೋದರ ತಾಂಡೇಲ್ ಕಾಣೆಯಾದ ಮೀನುಗಾರ. ವಿಜಯ್ ಫರ್ನಾಂಡೀಸ್, ಶಂಕರ್ ತಾಂಡೇಲ್ ಹಾಗೂ ಕಾಮೇಶ್ವರ ತಾಂಡೇಲ್ ಅವರನ್ನು ರಕ್ಷಣೆ ಮಾಡಲಾಗಿದೆ. ದೋಣಿ ಮುಳುಗಡೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದ ಇವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ದಡಕ್ಕೆ ವಾಪಸ್ಸಾಗುವಾಗ ಸಂದರ್ಭದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿದೆ ಅಂತ ತಿಳಿದುಬಂದಿದೆ. ಕಾಣೆಯಾದ ಮೀನುಗಾರನಿಗಾಗಿ ಶೋಧ ಕಾರ್ಯ ನಡೆಸಲಾಗ್ತಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆ- ಓರ್ವ ನಾಪತ್ತೆ, ಮೂವರ ರಕ್ಷಣೆ appeared first on News First Kannada.

Source: newsfirstlive.com

Source link