ನವದೆಹಲಿ: ಗುಜರಾತ್ನ ಗಿರ್ ಸೋಮನಾಥ್ ಜಿಲ್ಲೆಯ ಕರಾವಳಿಯಲ್ಲಿ ದೋಣಿಗಳು ಮಗುಚಿದ ಪರಿಣಾಮ 10 ಮೀನುಗಾರರು ನಾಪತ್ತೆಯಾಗಿದ್ದಾರೆ.
ಗುಜರಾತ್ನಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಅತಿಯಾದ ಗಾಳಿಯಿಂದ ಸುಮಾರು 10 ರಿಂದ12 ದೋಣಿಗಳು ಮಗುಚಿದೆ. ಈ ವೇಳೆ ದೋಣಿಗಳಲ್ಲಿದ್ದ 10 ಮೀನುಗಾರರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಕಾಣೆಯಾದ ಮೀನುಗಾರರ ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಗುಜರಾತ್ನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.