ಬೆಂಗಳೂರು: ಗೋಲ್ಡನ್​ ಸ್ಟಾರ್​​ ಗಣೇಶ್​ ಅಭಿನಯದ ಮುಂಗಾರು ಮಳೆ-2 ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ ಶೆಟ್ಟಿ ಅಲಿಯಾಸ್​ ಹರೀಶ್​ನನ್ನು ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಕಾನೂನು ಬಾಹಿರ ಕೃತ್ಯ ನಡೆಸಿದ ಆರೋಪದಲ್ಲಿ ಸಿಸಿಬಿ ಪೊಲೀಸರು ಹರಿರಾಜ ಶೆಟ್ಟಿಯನ್ನು ಬಂಧಿಸಿದ್ದಾರೆ. ಬಂಧಿತ ಹರೀಶ್​​ ನಗರದಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಹತ್ತಾರು ಕಡೆ ಜೂಜು ಅಡ್ಡೆ ಹಾಗೂ ಬ್ಯಾನ್ ಇರುವ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಎಂಬ ಆರೋಪವಿದೆ. ಅನೇಕ ಬಾರಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದರೂ ಕೃತ್ಯವನ್ನು ಮುಂದುವರಿಸಿದ್ದ. ಕಳೆದ 2014 ರಿಂದಲೂ ಈ ಅಕ್ರಮ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ನಗರದ ಪ್ರಮುಖ ಜೂಜುಕೋರ ಅಂತಾ ಗೂಂಡಾ ಕಾಯ್ದೆಯಡಿ ಹರಿರಾಜ ಶೆಟ್ಟಿ ಬಂಧನ ಮಾಡಲಾಗಿದ್ದು, ಇವರೆಗೂ ಆತನ ವಿರುದ್ಧ 13 ಕೇಸ್​​ಗಳು ಪತ್ತೆಯಾಗಿದೆ. ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್, ವೈಯಾಲಿ ಕಾವಲ್, ಕೋರಮಂಗಲ, ಅಶೋಕನಗರಣ ಬಸವೇಶ್ವರ ನಗರ, ಕೆ.ಪಿ ಅಗ್ರಹಾರ, ಇಂದಿರಾನಗರ ಠಾಣೆಗಳಲ್ಲಿ ಈತನ ವಿರುದ್ಧ ಪ್ರರಕಣಗಳು ದಾಖಲಾಗಿದೆ.

ಪೊಲೀಸರಿಗೆ ಟಾರ್ಚರ್​​ ಕೊಡ್ತಿದ್ದ ಆರೋಪಿ
ಅಕ್ರಮವಾಗಿ ನಡೆಸುತ್ತಿದ್ದ ಕ್ಲಬ್​​ಗಳ ಮೇಲೆ ದಾಳಿ ಮಾಡುತ್ತಿದ್ದ ಪೊಲೀಸರನ್ನೇ ಟಾರ್ಗೆಟ್​ ಮಾಡುತ್ತಿದ್ದ ಹರಿರಾಜ ಶೆಟ್ಟಿ, ತಮ್ಮಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್​ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಿ ಅವರನ್ನು ತೇಜೋವಧೆ ಮಾಡುವ ಕಾರ್ಯ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದ. ಇದಕ್ಕೆ ಬಳಿಕ ವಿವಿಧ ಠಾಣೆ ಪೊಲೀಸರಿಂದ ಸಿಸಿಬಿ ಆಯುಕ್ತರಿಗೆ ದೂರು ನೀಡಿದ್ದ ಎನ್ನಲಾಗಿದೆ.

ಸಿಸಿಬಿಯಿಂದ ಮಧ್ಯಂತರ ಅರ್ಜಿ
ಪೊಲೀಸರ ಎಷ್ಟೇ ಎಚ್ಚರಿಕೆ ನೀಡಿದರೂ ಕೃತ್ಯವನ್ನು ಮುಂದುವರಿಸಿದ ಕಾರಣ ಹರಿರಾಜ್​​ ವಿರುದ್ಧ ಗೂಂಡಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದರು. ಆದರೆ ಹೈಕೋರ್ಟ್ ರಜಾ ದಿನದ ಪೀಠದಲ್ಲಿ ಅರ್ಜಿ ಸಲ್ಲಿಕೆ ಮಾಡಿ ತನ್ನ ವಿರುದ್ಧ ಕ್ರಮಕೈಗೊಳ್ಳಲು ಸ್ಟೇ ತಂದಿದ್ದ. ಪೊಲೀಸರು ಹಣಕ್ಕಾಗಿ ಟಾರ್ಗೆಟ್ ಮಾಡಿದ್ದಾರೆ ಎಂದು ಕೋರ್ಟ್​​ನಲ್ಲೂ ಆರೋಪಿಸಿದ್ದ. ಆದರೆ ಸ್ಟೇ ವಿರುದ್ಧದ ಆದೇಶದ ವಿರುದ್ಧ ಸಿಸಿಬಿ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿತ್ತು.

ಸಿಸಿಬಿ ಸಲ್ಲಿಕೆ ಮಾಡಿದ್ದ ಮಧ್ಯಂತರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಆರೋಪಿಯ ಪೂರ್ವಾಪರ ತಿಳಿದು ಸ್ಟೇ ತೀರ್ಪುನ್ನು ಅಸಿಂಧುಗೊಳಿಸಿತ್ತು. ಅಲ್ಲದೇ ಗೂಂಡಾಕಾಯ್ದೆ ಅಡಿಯಲ್ಲಿ ಬಂಧಿಸಿ ವಿಚಾರಣೆ ಮಾಡಲು ಅನುಮತಿ ನೀಡಿತ್ತು. ಕೋರ್ಟ್​​ ಆದೇಶದ ಬಳಿಕ ಹರಿರಾಜ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್​​​​​ ಮಾಡಿದ್ದಾರೆ.

The post ಮುಂಗಾರುಮಳೆ-2 ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಅರೆಸ್ಟ್​ appeared first on News First Kannada.

Source: newsfirstlive.com

Source link