ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧ ಎಂದ ನಿಖಿಲ್ -ಮಂಡ್ಯದಿಂದಲೇ ಫಿಕ್ಸ್?


ಮಂಡ್ಯ: ಮುಂದಿನ ಚುನಾವಣೆಯಲ್ಲಿ ಪಕ್ಷ ಬಯಸಿದರೆ ಸ್ಪರ್ಧೆಗೆ ಸಿದ್ಧ ಎಂದು ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​​ ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಪಾಂಡವಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್​​, ಗೆಲ್ಲೋದು ಸೋಲುವುದು ರಾಜಕಾರಣದಲ್ಲಿ ಸಹಜ. ಸೋತಾಗಲೇ ನಮಗೆ ಮುಂದಿನ ದಿನಗಳಲ್ಲಿ ನಮ್ಮ‌ ನಡೆ ಹೇಗಿರಬೇಕೆಂಬ ಬಗ್ಗೆ ಆತ್ಮಾವಲೋಕ ಆಗುತ್ತೆ. ಅದಕ್ಕೆ‌‌ ನಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಕಳೆದ ಲೋಕಸಭೆಯಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ರೈತ ಸಂಘಟನೆ ಎಲ್ಲರೂ ಸೇರಿ ಮುಗಿಸಿದ್ದನ್ನ ನೋಡಿದ್ದೇವೆ. ಆದರೆ ಅದರ ಬಗ್ಗೆ ಪದೇ ಪದೇ ಚರ್ಚೆ ಮಾಡುವಂತಹದ್ದು ಸೂಕ್ತವಲ್ಲ. ನಮ್ಮ ಎಲ್ಲಾ ಕಾರ್ಯಕರ್ತರು ನಮ್ಮ‌ ಪಕ್ಕಕ್ಕಾಗಿ ದುಡಿದಿದ್ದಾರೆ. ಪಕ್ಷ ಒಪ್ಪಿದ್ರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಸಿದ್ಧವಾಗಿದ್ದೀನಿ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ‘ಬನ್ನಿ ಗೌಡ್ರೇ ಕುತ್ಕೋಳಿ’ಎಂದ ಮೋದಿ..ಬಾಯ್ತುಂಬ ನಕ್ಕ ದೇವೇಗೌಡ

ಕೆ.ಆರ್ ಪೇಟೆ ಉಪ ಚುನಾವಣೆಯಾದ ನಂತರ ನಾವು ಪರಿಷತ್​ ಚುನಾವಣೆ ಎದುರಿಸುತ್ತಿದ್ದೇವೆ. ನಾನು ಯಾವಾಗಲೂ ಕಾರ್ಯಕರ್ತರ ಜೊತೆ ಇರ್ತಿನಿ. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡರನ್ನ ಒತ್ತಾಯ ಪೂರಕವಾಗಿ ನಿಲ್ಲಿಸಿಲ್ಲ. ಅವರು ನಾನು ಈಗಾಗಲೇ ಒಮ್ಮೆ ಎಮ್‌ ಎಲ್ ಸಿ ಆಗಿದ್ದೀನಿ. ಬೇರೊಬ್ಬರಿಗೆ ಅವಕಾಶ ನೀಡಿ ಎಂದಿದ್ದರು. ಚುನಾವಣೆ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪ ಸಹಜ. ಅದಕ್ಕೆಲ್ಲಾ ಡಿಸೆಂಬರ್ 10 ರಂದು ಜನ ಉತ್ತರ ನೀಡ್ತಾರೆ.

ಇದನ್ನೂ ಓದಿ: ವಿಧಾನ ಪರಿಷತ್​ ಎಲೆಕ್ಷನ್​ನಲ್ಲಿ ಮೋದಿ ಬೆಂಬಲ ನೀಡುವಂತೆ ಕೋರಿದ್ದಾರೆ- HDD

News First Live Kannada


Leave a Reply

Your email address will not be published. Required fields are marked *