ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರವಿದೆ; ಬರ ಹೆಚ್ಚಾಗಲಿದೆ: ಕೋಡಿಮಠ ಶ್ರೀ ಭವಿಷ್ಯ | Kodi Mutt Swamiji Prediction on Natural Disasters Education System in Karnataka


ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರವಿದೆ; ಬರ ಹೆಚ್ಚಾಗಲಿದೆ: ಕೋಡಿಮಠ ಶ್ರೀ ಭವಿಷ್ಯ

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ

ಚಿಕ್ಕಬಳ್ಳಾಪುರ: ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರವಿದೆ. ಮುಂದಿನ ದಿನಗಳಲ್ಲಿ ಬರ ಹೆಚ್ಚಾಗಲಿದೆ. ಪ್ರಕೃತಿ ಅವಾಂತರಗಳು ಹೆಚ್ಚಾಗಿ ಮನುಷ್ಯರಿಗೆ ತೊಂದೆಯಾಗಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ. ನೈಜ ಶಿಕ್ಷಣದ ಬದಲು ವ್ಯವಸ್ಥೆಯಲ್ಲಿ ಜಾತಿ ಶಿಕ್ಷಣ ಹೆಚ್ಚಾಗ್ತಿದೆ. ನ್ಯಾಯಯುತ ಧರ್ಮದ ಬದಲು ಜಾತಿ ಭೇದ ಭಾವ ಹೆಚ್ಚಾಗ್ತಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ (ಫೆಬ್ರವರಿ 11) ಕೋಡಿಮಠದ ಡಾ. ಶಿವಾನಂದ ಶಿವಯೋಗೀಂದ್ರಶ್ರೀ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಕೊರೊನಾ ರೂಪಾಂತರ ಆಗುವ ಲಕ್ಷಣಗಳು ಬಹಳ ಇವೆ. ಸಂಶಯ, ಅಸಹನೆ, ದ್ವೇಷ, ರಾಜಕೀಯ ಕಲಹ ಹೆಚ್ಚಾಗುತ್ತೆ. ಆಶ್ವಿಜದಿಂದ ಸಂಕ್ರಾಂತಿಯೊಳಗೆ ರಾಷ್ಟ್ರಮಟ್ಟದಲ್ಲಿ ಅವಘಡ ಸಂಭವಿಸಲಿದೆ ಎಂದು ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗೀಂದ್ರಶ್ರೀ ಭವಿಷ್ಯ ನುಡಿದಿದ್ದರು.

ಭವಿಷ್ಯ ಎಂಬ ವಿಚಾರವನ್ನು ಒಪ್ಪುವ ಬಹುತೇಕರು ಕೋಡಿಮಠದ ಶ್ರೀಗಳ ಭವಿಷ್ಯದ ಬಗ್ಗೆ ಬಹಳಷ್ಟು ನಂಬಿಕೆ ಇಟ್ಟುಕೊಂಡಿರುತ್ತಾರೆ. ಕೋಡಿಮಠದ ಸ್ವಾಮೀಜಿ ಭವಿಷ್ಯ ಈ ಮೊದಲು ನಿಜವಾದ ಬಗ್ಗೆ ಉದಾಹರಣೆಗಳಿವೆ. ದೇಶದಲ್ಲಿ ಬಹಳ ದೊಡ್ಡ ಗಂಡಾಂತರ ಆಗಲಿದೆ ಎಂಬ ಬಗ್ಗೆ ಈ ಮೊದಲು ಹೇಳಿದ್ದರು. ಬಳಿಕ ಸೇನಾ ವಿಮಾನ ಪತನ ಆಗಿದ್ದನ್ನು ಉಲ್ಲೇಖಿಸಿ ತಮ್ಮ ಭವಿಷ್ಯದ ಬಗ್ಗೆ ಕೋಡಿಶ್ರೀಗಳು ಹೇಳಿದ್ದರು.

ಕೊರೊನಾ ಹೆಚ್ಚಾಗಲಿದೆ ಎಂಬ ಭವಿಷ್ಯವನ್ನು ಮೂರನೇ ಅಲೆಗೂ ಮೊದಲು ನೀಡಿದ್ದರು. ಅಲ್ಲದೇ, ಮಳೆ ಹೆಚ್ಚಾಗಿ, ಅತಿವೃಷ್ಟಿ, ಪ್ರಕೃತಿ ವಿಕೋಪ ಸಂಭವಿಸಲಿರುವ ಬಗ್ಗೆಯೂ ಈ ಮೊದಲು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದರು.

TV9 Kannada


Leave a Reply

Your email address will not be published.