
ಸಿಎಂ ಬಸವರಾಜ ಬೊಮ್ಮಾಯಿ
ಒತ್ತಡ ರಹಿತ ವಿದ್ಯಾಭ್ಯಾಸ ಮಾಡುವ ವಾತಾವರಣವಿರಬೇಕು. ಈ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಪರಿಚಯ ಮಾಡಲಾಗುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ಕೊವಿಡ್ನಿಂದ (Covid 19) ಶಾಲಾ-ಕಾಲೇಜು ಮಕ್ಕಳು ಒತ್ತಡದಲ್ಲಿದ್ದಾರೆ. ಒತ್ತಡ ರಹಿತ ವಿದ್ಯಾಭ್ಯಾಸ ಮಾಡುವ ವಾತಾವರಣವಿರಬೇಕು. ಈ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಪರಿಚಯ ಮಾಡಲಾಗುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಯೋಗಾಭ್ಯಾಸ ತರಗತಿ (Yoga Class) ಬರಲಿವೆ ಎಂದು ಮಾಹಿತಿ ನೀಡಿದ ಬೊಮ್ಮಾಯಿ, ಈ ಸಂಬಂಧ ಪರಿಣಿತರ ಜತೆ ಚರ್ಚೆ ಮಾಡುತ್ತೇವೆ. ಪರಿಣಿತರ ಜತೆ ಚರ್ಚೆ ಬಳಿಕ ಯೋಗ ಪಠ್ಯ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.
ರಾಜ್ಯಕ್ಕೆ ಮೋದಿಯವರು ಬರೋದೇ ಒಂದು ವಿಶೇಷ:
ಜೂನ್ 21ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮೈಸೂರಿನಲ್ಲಿ ಯೋಗಾ ದಿನಾಚರಣೆಯಲ್ಲಿ ಮೋದಿ ಭಾಗಿಯಾಗುತ್ತಾರೆ. ರಾಜ್ಯಕ್ಕೆ ಮೋದಿಯವರು ಬರೋದೇ ಒಂದು ವಿಶೇಷ. ಮೋದಿಯವರು ಪಾಲ್ಗೊಳ್ಳುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಂತಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.