ಮುಂದಿನ ವರ್ಷ ಭಾರತದಿಂದ ಎರಡಂಕಿಯ ಆರ್ಥಿಕ ಬೆಳವಣಿಗೆ: ವಿಶ್ವ ಆರ್ಥಿಕ ಫೋರಂ ಅಧ್ಯಕ್ಷ | Expecting India To Achieve Double Digit Growth Said World Economic Forum President


ಮುಂದಿನ ವರ್ಷ ಭಾರತದಿಂದ ಎರಡಂಕಿಯ ಆರ್ಥಿಕ ಬೆಳವಣಿಗೆ: ವಿಶ್ವ ಆರ್ಥಿಕ ಫೋರಂ ಅಧ್ಯಕ್ಷ

ನರೇಂದ್ರ ಮೋದಿ (ಸಂಗ್ರಹ ಚಿತ್ರ)

ವಿಶ್ವ ಆರ್ಥಿಕ ಫೋರಂ ಅಧ್ಯಕ್ಷ ಬೋರ್ಗೆ ಬ್ರೆಂಡೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಮತ್ತು ಭಾರತವು ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಮತ್ತು ಅದರ ಜಿ20 ಅಧ್ಯಕ್ಷ ಸ್ಥಾನಕ್ಕೆ ತಯಾರಿ ನಡೆಸುತ್ತಿರುವಾಗ ಮುಂದಿನ ವರ್ಷ ಎರಡಂಕಿಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, “ನಿಮ್ಮನ್ನು @borgebrende ಭೇಟಿಯಾಗಲು ಮತ್ತು ಹಲವಾರು ವಿಷಯಗಳ ಬಗ್ಗೆ ನಿಮ್ಮೊಂದಿಗೆ ಒಳನೋಟವುಳ್ಳ ಸಂವಾದವನ್ನು ನಡೆಸಲು ಸಂತೋಷವಾಯಿತು. ಕೊವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳು ಮತ್ತು ಕಳೆದ ಕೆಲವು ತಿಂಗಳಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳನ್ನು ಎತ್ತಿ ತೋರಿಸಿದೆ” ಎಂದಿದ್ದಾರೆ. ಬ್ರೆಂಡೆ ಅವರು, ಪ್ರಧಾನಿ ಮೋದಿಯವರೊಂದಿಗೆ “ಅತ್ಯುತ್ತಮ ಮತ್ತು ಅತ್ಯಂತ ಪ್ರಮುಖ” ಭೇಟಿ ಆಗಿದ್ದಾಗಿ ಹೇಳಿದ್ದಾರೆ.

“ಭಾರತವು ಮತ್ತೊಮ್ಮೆ ದೊಡ್ಡ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಭಾರತವು ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಮತ್ತು ಅದರ G20 ಅಧ್ಯಕ್ಷತೆಗೆ ತಯಾರಿ ನಡೆಸುತ್ತಿರುವಾಗ ಮುಂದಿನ ವರ್ಷ ಎರಡು ಅಂಕಿಗಳ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ,” ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: GDP: ಭಾರತದ ಜಿಡಿಪಿ FY22ಕ್ಕೆ ಶೇ 9.5ರಷ್ಟಾಗುವ ಅಂದಾಜು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

TV9 Kannada


Leave a Reply

Your email address will not be published. Required fields are marked *