ಮುಂದಿನ ವರ್ಷ IPL ಭಾರತದಲ್ಲೇ ನಡೆಯಲಿದೆ; BCCI


ಮುಂದಿನ ವರ್ಷ ‘ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ಆಯೋಜಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಈ ಸಂಬಂಧ ಮಾತಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್​ ಸೀಸನ್​​ 15 ಭಾರತದಲ್ಲೇ ನಡೆಯಲಿದೆ ಎಂದರು.

ಈಗ ಎರಡು ಹೊಸ ತಂಡಗಳ ಸೇರ್ಪಡೆಯಾಗಿವೆ. ಹೀಗಾಗಿ ಐಪಿಎಲ್​​ ಟೂರ್ನಿಯು ಮತ್ತಷ್ಟು ರೋಚಕವಾಗಿರಲಿದೆ. ಸದ್ಯದಲ್ಲೇ ಮೆಗಾ ಹರಾಜು ನಡೆಯಲಿದ್ದು, ಹೊಸ ತಂಡಗಳು ಹೇಗಿರಲಿವೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.
ಮಾರಕ ಕೊರೋನಾ ಕಾರಣದಿಂದಾಗಿ ಕಳೆದ ಐಪಿಎಲ್​​​ ಅರ್ಧ ಭಾರತದಲ್ಲಿ ನಡೆಸಲಾಯ್ತು. ಬಳಿಕ ಅರ್ಧ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: NCA ವೇಗದ ಬೌಲಿಂಗ್​​​​ ಕೋಚ್​ ಆಗಿ ಟ್ರಾಯ್ ಕೂಲಿ; ಕರೆ ತರುವಲ್ಲಿ ಸೌರವ್​​ ಗಂಗೂಲಿ ಯಶಸ್ವಿ

News First Live Kannada


Leave a Reply

Your email address will not be published. Required fields are marked *