ಬೆಂಗಳೂರು: ಕಾಂಗ್ರೆಸ್​​ ಕಾರ್ಯಕರ್ತರಲ್ಲಿ ಮುಂದಿನ ಸಿಎಂ ಯಾರಾಗಬೇಕೆಂಬ ಪೈಪೋಟಿ ಹೆಚ್ಚಾದ ಬೆನ್ನಲ್ಲೇ ಕಾಂಗ್ರೆಸ್ ಬಣಗಳಾಗಿ ವಿಂಗಡಿಸಿ ಹೋಗ್ತಿದೆ ಎಂದು ವಿಪಕ್ಷ ನಾಯಕರು ಹೇಳಿಕೆಗಳನ್ನ ನೀಡುತ್ತಿದ್ದರು. ಈ ಮಧ್ಯೆ ಇದೀಗ ಹಿರಿಯರ ಬಣ ಮತ್ತೆ ಮುನ್ನಲೆಗೆ ಬಂದಂತಿದೆ.

ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ವಿವಾದ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಮೂರನೇ ಬಣ ಮುನ್ನಲೆಗೆ ಬಂದಿದೆ ಎಂದೆನ್ನಿಸುವಂತೆ ಇಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಬಿ.ಕೆ. ಹರಿಪ್ರಸಾದ್ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಮುಂದಿನ ಮುಖ್ಯಮಂತ್ರಿ ವಿವಾದದ ಹಿನ್ನೆಲೆಯಲ್ಲಿ ಹಿರಿಯ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

The post ಮುಂದಿನ ಸಿಎಂ ಜಟಾಪಟಿ ಬೆನ್ನಲ್ಲೇ ಒಂದೆಡೆ ಸೇರಿದ ಕೈ ಹಿರಿಯ ನಾಯಕರು.. ರಹಸ್ಯ ಸಭೆಯಲ್ಲಿ ಯಾರೆಲ್ಲಾ ಇದ್ರು.? appeared first on News First Kannada.

Source: newsfirstlive.com

Source link