ಮುಂದಿನ ಸಿಎಂ ಜಟಾಪಟಿ: ಹಿರಿಯ ಅಭ್ಯರ್ಥಿ ಖರ್ಗೆ ಇಲ್ವಾ..? ಎಂದ ಹೆಚ್.ಎಂ.ರೇವಣ್ಣ

ಮುಂದಿನ ಸಿಎಂ ಜಟಾಪಟಿ: ಹಿರಿಯ ಅಭ್ಯರ್ಥಿ ಖರ್ಗೆ ಇಲ್ವಾ..? ಎಂದ ಹೆಚ್.ಎಂ.ರೇವಣ್ಣ

ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಚರ್ಚೆ ವಿಚಾರ ಜೋರಾಗಿ ಸದ್ದುಮಾಡುತ್ತಿರುವ ಹಿನ್ನೆಲೆ ಮಾಜಿ ಸಚಿವ ಹೆಚ್​ಎಂ ರೇವಣ್ಣ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನ ಹೇಳಿದ್ದಾರೆ.

ನಾನು ಕೂಡ ಸಿಎಂ ಆಕಾಂಕ್ಷಿ ಎಂದ ಎಂ.ಬಿ. ಪಾಟೀಲ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಹೆಚ್​ಎಂ ರೇವಣ್ಣ.. ಕಾಂಗ್ರೆಸ್​ನಲ್ಲಿ ಹಿರಿಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಇಲ್ವಾ..? ಒಬ್ಬರು ಹೆಸರು ಹೇಳಿದ ತಕ್ಷಣ ಇನ್ನೊಬ್ಬರು ಮತ್ತೊಬ್ಬರ ಹೆಸರು ಹೇಳುತ್ತಾರೆ. ನಾನು ಈ ವಿಚಾರ ಇಲ್ಲಿಗೆ ನಿಲ್ಲಿಸೋ ಪ್ರಯತ್ನ ಮಾಡ್ತೀನಿ.

ಮುಂದಿನ ಸಿಎಂ ವಿಚಾರ ಇದೊಂದು ಅಪ್ರಸ್ತುತ.. ಯಾರೋ ಒಬ್ಬರು ಹುಟ್ಟು ಹಾಕಿದ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ಡಿ.ಕೆ. ಶಿವಕುಮಾರ್ ಬಣ ಮತ್ತೊಬ್ಬರ ಬಣ ಅಂತ ಹೇಳೊದು ಬೇಡ ಎಂದು ಎಚ್ ಎಂ ರೇವಣ್ಣ ಹೇಳಿದ್ದಾರೆ.

The post ಮುಂದಿನ ಸಿಎಂ ಜಟಾಪಟಿ: ಹಿರಿಯ ಅಭ್ಯರ್ಥಿ ಖರ್ಗೆ ಇಲ್ವಾ..? ಎಂದ ಹೆಚ್.ಎಂ.ರೇವಣ್ಣ appeared first on News First Kannada.

Source: newsfirstlive.com

Source link