ಮುಂದಿನ 2 ವಾರ ತುರ್ತು ಚಿಕಿತ್ಸೆ ಅಗತ್ಯ ಇದ್ದ್ದೋರು ಮಾತ್ರ ಆಸ್ಪತ್ರೆಗೆ ಬನ್ನಿ-ಆರೋಗ್ಯ ಇಲಾಖೆ


ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಕೇಸ್​ಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂದಿನ ಎರಡು ವಾರಗಳ ಕಾಲ ಅನಾರೋಗ್ಯದಿಂದ ಗಂಭೀರವಾಗಿರೋ/ ತುರ್ತು ಚಿಕಿತ್ಸೆಯ ಅಗತ್ಯವಿರುವವರು ಮಾತ್ರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕೊರೊನಾ ಕೇಸ್​ ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಕೊವೀಡ್​​ ಸೋಂಕಿನ ಲಕ್ಷಣಗಳು ಕಂಡು ಬಂದವರಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ಗಂಭೀರ ಖಾಯಿಲೆ ಇದ್ದವರು ಮಾತ್ರ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯಿರಿ. ಲಘು ಕಾಯಿಲೆಗಳು ಕಂಡು ಬಂದರೇ ಮನೆಯಲ್ಲೇ ಚಿಕಿತ್ಸೆ ಪಡೆಯರಿ ಎಂದು ಸಲಹೆ ನೀಡಿದೆ.

2 ವಾರಗಳ ಕಾಲ ಈ ಸೂಚನೆ ಪಾಲಿಸಲು ಸಾರ್ವಜನಿಕರಿಗೆ ಇಲಾಖೆ ಮನವಿ ಮಾಡಿದ್ದು, ಗಂಭೀರ ಕಾಯಿಲೆ ಇದ್ದವರು ದೊಡ್ಡ, ಮಲ್ಟಿ ಸ್ಪೆಷಾಲಿಟಿಗೆ ದಾಖಲಾಗಬೇಕು. ಈ ಕುರಿತು ಖಾಸಗಿ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿದೆ ಎಂದ ಆರೋಗ್ಯ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಕೊರೊನಾ ಸೋಂಕಿನ ಹರಾಡುವಿಕೆಯನ್ನು ತಡೆಯಲು ಸರ್ಕಾರ ಈ ಸೂಚನೆಯನ್ನು ನೀಡಿದೆ.

News First Live Kannada


Leave a Reply

Your email address will not be published. Required fields are marked *