ಮುಂದಿನ 8 ವರ್ಷದ ‘ವಿಶ್ವಕಪ್ ಟೂರ್ನಿ’ ಪಟ್ಟಿ​​​ ರಿಲೀಸ್​​ ಮಾಡಿದ ಐಸಿಸಿ; ಭಾರತದಲ್ಲಿ ಯಾವಾಗ..?


ಟಿ20 ವಿಶ್ವಕಪ್ ಮುಗಿದ ಎರಡೇ ದಿನಗಳಲ್ಲಿ ಐಸಿಸಿಯು 2024 ರಿಂದ 2031ರ ಅವಧಿಯಲ್ಲಿ ನಡೆಯುವ ಐಸಿಸಿ ಪ್ರಾಯೋಜಿತ ಕ್ರಿಕೆಟ್​ ಟೂರ್ನಿಗಳ ಪಟ್ಟಿ ಬಿಡುಗಡೆಗೊಳಿಸಿದೆ.

ಈ ಅವಧಿಯಲ್ಲಿ ಎರಡು ಏಕದಿನ ವಿಶ್ವಕಪ್, 4 ಟಿ-20 ವಿಶ್ವಕಪ್​ಗಳು, 2 ಐಸಿಸಿ ಚಾಂಪಿಯನ್ಸ್​ ಟ್ರೋಫಿ ಸೇರಿದಂತೆ ಒಟ್ಟು 8 ಐಸಿಸಿ ಟೂರ್ನಿಗಳು ನಡೆಯಲಿವೆ. ಹಾಗೂ ಈ ಪಂದ್ಯಗಳನ್ನು ಒಟ್ಟು 14 ದೇಶಗಳು ಆಯೋಜಿಸಲಿದೆ. ಈ ಪೈಕಿ ಭಾರತ 3 ಪ್ರಮುಖ ಟೂರ್ನಿಗಳನ್ನು ಆಯೋಜಿಸಲಿದೆ.

ಎಲ್ಲಿ? ಯಾವಾಗ ಆಯೋಜನೆ..?

2024: ಅಮೆರಿಕ ಮತ್ತು ವೆಸ್ಟ್ ಇಂಡೀಸ್ (ಟಿ20 ವಿಶ್ವಕಪ್​​)
2025: ಪಾಕಿಸ್ತಾನ (ಚಾಂಪಿಯನ್ಸ್​​ ಟ್ರೋಫಿ)
2026: ಭಾರತ ಮತ್ತು ಶ್ರೀಲಂಕಾ (ಟಿ20 ವಿಶ್ವಕಪ್​​)
2027: ದಕ್ಷಿಣ ಆಫ್ರಿಕ, ಜಿಂಬಾಬ್ವೆ, ನಮೀಬಿಯಾ (ಏಕದಿನ ವಿಶ್ವಕಪ್​)
2028: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ (ಟಿ20 ವಿಶ್ವಕಪ್​​)
2029: ಭಾರತ (ಚಾಂಪಿಯನ್ಸ್​​ ಟ್ರೋಫಿ)
2030: ಇಂಗ್ಲೆಂಡ್‌, ಐರ್ಲೆಂಡ್‌, ಸ್ಕಾಟ್ಲೆಂಡ್ (ಟಿ20 ವಿಶ್ವಕಪ್​​)
2031: ಭಾರತ ಮತ್ತು ಬಾಂಗ್ಲಾದೇಶ (ಏಕದಿನ ವಿಶ್ವಕಪ್​)

The post ಮುಂದಿನ 8 ವರ್ಷದ ‘ವಿಶ್ವಕಪ್ ಟೂರ್ನಿ’ ಪಟ್ಟಿ​​​ ರಿಲೀಸ್​​ ಮಾಡಿದ ಐಸಿಸಿ; ಭಾರತದಲ್ಲಿ ಯಾವಾಗ..? appeared first on News First Kannada.

News First Live Kannada


Leave a Reply

Your email address will not be published. Required fields are marked *