ಬೆಂಗಳೂರು: ಕಾಂಗ್ರೆಸ್​​ನಲ್ಲಿ ಈಗಾಗಲೇ ಮುಂದಿನ ಸಿಎಂ ಯಾರೆಂಬ ಪೈಪೋಟಿ ಶುರುವಾಗಿದೆ ಎನ್ನಲಾಗಿದ್ದು ಈವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ನಾಯಕರೇ ಮುಂದಿನ ಸಿಎಂ ಎನ್ನುತ್ತಿದ್ದ ಬಗ್ಗೆ ವರದಿಗಳಾಗಿದ್ದವು. ಇದೀಗ ಈ ಪೈಪೋಟಿಗೆ ಮೂರನೇ ವ್ಯಕ್ತಿಯ ಪ್ರವೇಶವಾಗಿದೆ ಎನ್ನಲಾಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪರ ಅಭಿಯಾನ ನಡೆಯುತ್ತಿದೆ. #RamalingareddyForCM ಎಂಬ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರಾಮಲಿಂಗಾರೆಡ್ಡಿ ಬೆಂಬಲಿಗರು ಮುಂದಿನ ಸಿಎಂ ನಮ್ಮ ನಾಯಕರೇ ಎನ್ನುತ್ತಿದ್ದಾರೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ.. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ.. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

The post ಮುಂದಿನ CM ಪೈಪೋಟಿಗೆ 3ನೇ ನಾಯಕನ ರಂಗಪ್ರವೇಶ..?; ನಾನವನಲ್ಲ ಎಂದ ರಾಮಲಿಂಗಾರೆಡ್ಡಿ appeared first on News First Kannada.

Source: newsfirstlive.com

Source link