ಮುಂದುವರಿದ ಕೋವಿಡ್​ ಆರ್ಭಟ; ರಾಜ್ಯದಲ್ಲಿಂದು 28 ಸಾವಿರ ಕೇಸ್​​, 14 ಸಾವು


ಬೆಂಗಳೂರು:  ರಾಜ್ಯದಲ್ಲಿ ಕೋವಿಡ್​​ ವೈರಸ್​​ ಹಾವಳಿ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 28,723 ಕೊರೊನಾ ಕೇಸ್​​ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್​​​ ಟ್ವೀಟ್​​ ಮಾಡಿ ಮಾಹಿತಿ ನೀಡಿದ್ದಾರೆ.

ಇಡೀ ರಾಜ್ಯದಲ್ಲಿ 28,723 ಕೇಸ್​​ ಪತ್ತೆಯಾಗಿದ್ದು ಇದರಲ್ಲಿ ಬೆಂಗಳೂರಿನಲ್ಲಿಯೇ 20,121ಕೇಸ್​​ ದಾಖಲಾಗಿದೆ. ಈ ಮೂಲಕ ಪಾಸಿಟಿವಿಟಿ ರೇಟ್​​ ಶೇ. 12.98%ಕ್ಕೆ ಏರಿದೆ. ಇಂದು ಒಂದೇ ದಿನ 3,105ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ಸದ್ಯ 1,41,337 ಆ್ಯಕ್ಟಿವ್​​ ಕೇಸ್​​ ಇವೆ. ಬೆಂಗಳೂರಿನಲ್ಲಂತೂ ಸುಮಾರು 1 ಲಕ್ಷ ಸಕ್ರಿಯ ಕೇಸುಗಳಿವೆ. ಇಂದು ಕೊರೋನಾಗೆ 14 ಮಂದಿ ಬಲಿಯಾಗಿದ್ದಾರೆ.

The post ಮುಂದುವರಿದ ಕೋವಿಡ್​ ಆರ್ಭಟ; ರಾಜ್ಯದಲ್ಲಿಂದು 28 ಸಾವಿರ ಕೇಸ್​​, 14 ಸಾವು appeared first on News First Kannada.

News First Live Kannada


Leave a Reply

Your email address will not be published. Required fields are marked *