ದೆಹಲಿ ಪ್ರವಾಸದಲ್ಲಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಸಾಲು ಸಾಲು ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತಿದ್ದಾರೆ. ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಈ ವೇಳೆ 2023 ರಲ್ಲಿ ಬರುವ ಸಾರ್ವತ್ರಿಕ ಚುನಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ ಅಂತಾ ಸಿಎಂ ತಿಳಿಸಿದ್ದಾರೆ.

ಅದಕ್ಕೂ ಮೊದಲು ಸಿಎಂ ಬಿಎಸ್​ವೈ, ರಾಜ್ಯದ ನೂತನ ಕೇಂದ್ರ ಸಚಿವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಮೇಕೆದಾಟು ವಿಚಾರ ಹಾಗೂ ರಾಜ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಇನ್ನು ಜೆ.ಪಿ. ನಡ್ಡಾ ಅವರನ್ನ ಭೇಟಿಯಾದ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ರನ್ನ ಭೇಟಿಯಾದರು. ಈ ವೇಳೆ ಕರ್ನಾಟಕದ ಸ್ಥಳೀಯ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗಿದೆ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ರಾಜನಾಥ್ ಸಿಂಗ್ ಭೇಟಿ ಬಳಿಕ ಕೇಂದ್ರ ಗೃಹ ಸಚಿವ ಅಮಿತ್​ ಶಾರನ್ನ, ಸಿಎಂ ಬಿಎಸ್​ವೈ ಭೇಟಿಯಾದರು. ಇನ್ನು ದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ.. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ.. ನನ್ನ ರಾಜೀನಾಮೆ ಪ್ರಶ್ನೆ ಉದ್ಭವಿಸಿಲ್ಲ. ನಾನು ಬಂದಿರೋದು ರಾಜ್ಯದ ಅಭಿವೃದ್ಧಿ ವಿಚಾರವಾಗಿ. ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಬಂದಿದ್ದೇನೆ ಎಂದರು.

ಇನ್ನು ಬಿಎಸ್ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿದ್ದರು. ಈ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ.. ಸದಾ ಸಕರಾತ್ಮಕ ಚಿಂತನೆ, ಯೋಜನೆ, ಜನ ಕಲ್ಯಾಣ ಕಾರ್ಯಕ್ರಮ. ರೂಪಿಸುವ ಮಹಾ ಜೋಡಿಯ ನಗುವಿನಲೆಯ ಮೋಡಿ. ಇಂದು ಕರ್ನಾಟಕದ ಪಾಲಿಗೆ ಹಾಲು-ಜೇನಿನ ಸಂಗಮದ ಸವಿಯುಣಿಸಿದ ಕ್ಷಣಗಳೆನಿಸಿವೆ ಅಂತಾ ಟ್ವೀಟ್ ಮಾಡಿದ್ದಾರೆ.

The post ಮುಂದುವರಿದ BSY ಹೈಕಮಾಂಡ್ ಭೇಟಿ: ‘ಹಾಲು-ಜೇನಿನ ಸಂಗಮ’ ಎಂದ ವಿಜಯೇಂದ್ರ appeared first on News First Kannada.

Source: newsfirstlive.com

Source link