ಮುಂದುವರಿದ IT ರೇಡ್.. ದುಬೈನಿಂದ ಉಮೇಶ್ ಆಪ್ತನ ಕರೆಸಿಕೊಂಡ ಅಧಿಕಾರಿಗಳು..!

ಬೆಂಗಳೂರು: ನಗರದಲ್ಲಿ ಮೂರನೇ ದಿನವೂ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ಸತತ 48 ಘಂಟೆಗಳಿಂದ ಉಮೇಶ್ ಆಪ್ತ ಸೋಮಶೇಖರ್ ಮನೆ ಮೇಲೆ ದಾಳಿ ಮುಂದುವರಸಿದ್ದಾರೆ.​

ಮನೆಯಲ್ಲಿ ಸಿಕ್ಕಿರುವ ಕಡತಗಳನ್ನ ಐಟಿ ಅಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಸೋಮಶೇಖರ್ ಮನೆಯಲ್ಲಿ ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು. ಉಮೇಶ್​ಗೆ ಅತ್ಯಪ್ತಾರಾಗಿರುವ ಸೋಮಶೇಖರ್ ಕ್ಲಾಸ್ ಒನ್ ಕಾಂಟ್ರಾಕ್ಟರ್ ಎನ್ನಲಾಗಿದೆ.

ನೀರಾವರಿ ನಿಗಮದ ಹಲವು ಕಾಂಟ್ರಾಕ್ಟ್​ಗಳನ್ನ ಸೋಮಶೇಖರ್ ಪಡೆದುಕೊಳ್ಳುತ್ತಿದ್ದರು. ಇಬ್ಬರ ನಡುವೆ ಹಲವು ವ್ಯವಹಾರಗಳು ನಡೆದಿರುವ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಇನ್ನು ಉಮೇಶ್ ಅವರ ಮತ್ತೊಬ್ಬ ಆಪ್ತ ಅರವಿಂದ್ ಅವರನ್ನ ಐಟಿ ಅಧಿಕಾರಿಗಳು ದುಬೈನಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ನೀವು ಅಲ್ಲಿಂದ ವಾಪಸ್ ಬರೋತನಕ ನಮ್ಮ ದಾಳಿ ಮುಗಿಯಲ್ಲ ಎಂದು ಐಟಿ ಅಧಿಕಾರಿಗಳು ಸಂದೇಶವನ್ನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯೇ ಅರವಿಂದ ದುಬೈನಿಂದ ವಾಪಸ್ ಆಗಿದ್ದಾರೆ. ಮನೆಗೆ ವಾಪಸ್ ಬರ್ತಿದ್ದಂತೆ ಐಟಿ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆಸಿದ್ದಾರೆ. ರಾತ್ರಿಯಿಡಿ ಅರವಿಂದ್ ಸಮ್ಮುಖದಲ್ಲಿ ಮನೆಯನ್ನ ಮತ್ತೊಮ್ಮೆ ಶೋಧ ಕಾರ್ಯ ನಡೆಸಿದ್ದಾರೆ.

News First Live Kannada

Leave a comment

Your email address will not be published. Required fields are marked *