ಮುಂದುವರೆದ ಅರೆಸ್ಟ್.. 18 ನೇ ಆರೋಪಿ ಅಂದರ್

ಮುಂಬೈ: ಕ್ರೂಸ್ ಮೇಲೆ NCB ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದು ಐದು ದಿನಗಳೇ ಕಳೆದರೂ ಬಂಧನ ಪ್ರಕ್ರಿಯೆ ಮುಂದುವರೆದಿದೆ.

ನಿನ್ನೆ ತಡರಾತ್ರಿ ಇದೇ ಪ್ರಕರಣದ ವಿಚಾರವಾಗಿ ಮತ್ತೊಬ್ಬ ವ್ಯಕ್ತಿಯನ್ನ ಬಂಧಿಸಲಾಗಿದೆ. ಬಂಧನಕ್ಕೊಳಗಾದವನು ವಿದೇಶಿ ಪ್ರಜೆಯೆಂಬ ಮಾಹಿತಿ ಇದೆ. ಮುಂಬೈನ ಬಾಂದ್ರಾ ಬಳಿ ಈತನನ್ನ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಈವರೆಗೆ ಪ್ರಕರಣದಲ್ಲಿ ಒಟ್ಟು 18 ಮಂದಿಯ ಬಂಧನವಾದಂತಾಗಿದೆ. ಆರೋಪಿಯಿಂದ ಮೆಫೆಡ್ರೋನ್ ಹೆಸರಿನ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: NCB ಅಧಿಕಾರಿಗಳ ಲೈಫ್ ಎಷ್ಟು ರಿಸ್ಕಿ ಗೊತ್ತಾ..? ರಿಯಲ್ ಸಿಂಘಂ ಸಮೀರ್ ವಾಂಖೆಡೆ ಪತ್ನಿ ಹೇಳಿದ್ದೇನು..?

ಇತ್ತ ಬಂಧಿತ ಆರೋಪಿ ಅರ್ಬಾಜ್ ಸೇಠ್ ಮರ್ಚೆಂಟ್ ಪರ ವಕೀಲ ಮುಂಬೈನ ಎಸ್​ಪ್ಲನೇಡ್ ಕೋರ್ಟ್​​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಕ್ರೂಸ್ ಶಿಪ್​ನಲ್ಲಿ ಎನ್​ಸಿಬಿ ಅಧಿಕಾರಿಗಳು ಅರ್ಬಾಜ್​ನನ್ನ ಬಂಧಿಸಿದಾಗ ಆತನಿಂದ ಏನನ್ನಾದರೂ ವಶಪಡಿಸಿಕೊಂಡಿದ್ದಾರೆಯೇ ಎಂದು ದೃಢಪಡಿಸಲು ಸಿಸಿಟಿವಿ ಫೂಟೇಜ್​ನ್ನು ಅಧಿಕಾರಿಗಳು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

News First Live Kannada

Leave a comment

Your email address will not be published. Required fields are marked *