ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಹಾಗೂ ಲಾಕ್​ಡೌನ್ ಸಂಕಷ್ಟದ ಹಿನ್ನೆಲೆ ಬಾಲಿವುಡ್​ ನಟ ಸೋನು ಸೂದ್​ ಈಗಾಗಲೇ ಸಾವಿರಾರು ಮಂದಿಗೆ ಸಹಾಯ ಮಾಡಿದ್ದಾರೆ. ಅವರ ಸೇವೆ ಇಂದಿಗೂ ಕೂಡ ಮುಂದುವರೆದಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 5 ಸಾವಿರ ಜನರಿಗೆ ಆಹಾರ ವಿತರಣೆ ಮಾಡಲು ಸೋನು ಸೂದ್​ ಮುಂದಾಗಿದ್ದಾರೆ. ಸೋನುಸೂದ್ ಟ್ರಸ್ಟನ ಈ ಕಾರ್ಯಕ್ಕೆ ಕರ್ನಾಟಕ ರೈಲ್ವೆ ಪೊಲೀಸರು ಕೈ ಜೋಡಿಸಿದ್ದಾರೆ.

ರೈಲ್ವೆ ಪೊಲೀಸ್ ಹಾಗೂ ಬೀಜಿಂಗ್ ಬೈಟ್ಸ್ ರೆಸ್ಟೋರೆಂಟ್ ಸಹಯೋಗದೊಂದಿಗೆ ಸೋನುಸೂದ್ ಚಾರಿಟಬಲ್ ಟ್ರಸ್ಟ್, ಫುಡ್ ಫ್ರಮ್ ಸೂದ್  ಅನ್ನೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಡಿ ಪ್ರತಿನಿತ್ಯ 5 ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತದೆ. ನಗರದಲ್ಲಿ ಆಕ್ಸಿಜನ್ ಅಭಾವ ಎದುರಾದ ಸಂದರ್ಭಗಳಲ್ಲಿ ಸೋನುಸೂದ್​ ಟ್ರಸ್ಟ್​ ಸದಸ್ಯರು ಆಪದ್ಭಾಂದವರಂತೆ ಅಲ್ಲಿಗೆ ಬಂದು, ಆಕ್ಸಿಜನ್ ಸಿಲಿಂಡರ್​ಗಳ ಪೂರೈಕೆ ಮಾಡ್ತಿದ್ದಾರೆ. ಇಂದಿನಿಂದ ಆಕ್ಸಿಜನ್ ಪೂರೈಕೆ ಜೊತೆಗೆ ಆಹಾರ ಪೂರೈಕೆಯ ಮಹತ್ವದ ಕಾರ್ಯ ಕೂಡ ಮಾಡಲಿದ್ದಾರೆ.

ಬೆಂಗಳೂರಿನ ಸ್ಲಂ ನಿವಾಸಿಗಳಿಗೆ ಪ್ರತಿನಿತ್ಯ ಐದು ಸಾವಿರ ಆಹಾರ ಪೊಟ್ಟಣ ವಿತರಣೆ ಮಾಡಲು ಟ್ರಸ್ಟ್​ ನಿರ್ಧರಿಸಿದೆ.  ಸೋನುಸೂದ್ ಟ್ರಸ್ಟ್​​ನ ಸ್ವಯಂ ಸೇವಕರ ಕಾರ್ಯಕ್ಕೆ ಬೀಜಿಂಗ್ ಬೈಟ್ಸ್ ರೆಸ್ಟೊರೆಂಟ್ ಮಾಲೀಕ ಇಬ್ರಾಹಿಂ ಸಾಥ್ ನೀಡಿದ್ದಾರೆ. ಪ್ರತಿನಿತ್ಯ ಐದು ಸಾವಿರ ಜನರಿಗೆ ಅಡುಗೆ ತಯಾರಿಸಲು ರಿಚ್ಮಂಡ್ ಟೌನ್​ನಲ್ಲಿರುವ ತಮ್ಮ ಬೀಜಿಂಗ್ ಬೈಟ್ಸ್ ರೆಸ್ಟೋರೆಂಟ್ ಅನ್ನು ಉಚಿತವಾಗಿ ಬಳಸಿಕೊಳ್ಳಲು ನೀಡಿದ್ದಾರೆ ಇಬ್ರಾಹಿಂ.

 

The post ಮುಂದುವರೆದ ಸೋನು ಸೂದ್​ ಸೇವೆ:​ ಬೆಂಗಳೂರಲ್ಲಿ ನಿತ್ಯ 5000 ಜನರಿಗೆ ಆಹಾರ ವಿತರಣೆ appeared first on News First Kannada.

Source: newsfirstlive.com

Source link