‘ಮುಂಬರುವ ಇನ್ನಿಂಗ್ಸ್‌ಗಳಿಗೆ ಶುಭವಾಗಲಿ’ -ಕೊಹ್ಲಿಗೆ ಶುಭ ಕೋರಿದ ಕೆಎಲ್​ ರಾಹುಲ್


ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರೀತಿಯ ವಿರಾಟ್‌ ಕೊಹ್ಲಿ, ಕಳೆದ ಕೆಲ ವರ್ಷಗಳಲ್ಲಿ ನೀವು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಂದ ಪ್ರೀತಿಸಲ್ಪಟ್ಟಿದ್ದೀರಿ. ಈ ಹಂತದಲ್ಲಿಯೂ ಅವರು ನಿಮ್ಮನ್ನು ಬೆಂಬಲಿಸುತ್ತಾರೆ. ಮುಂಬರುವ ಇತರ ಇನ್ನಿಂಗ್ಸ್‌ಗಳಿಗೆ ಶುಭಾಶಯಗಳು’ ಎಂದಿದ್ದಾರೆ.

ಇನ್ನು ವಿರಾಟ್‌ ಕೊಹ್ಲಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನೆಡೆಸಿದ್ದರು. ಆ ಪೈಕಿ 40 ಪಂದ್ಯಗಳಲ್ಲಿ ಭಾರತ ಗೆದ್ದಿದೆ. 17 ಟೆಸ್ಟ್‌ಗಳಲ್ಲಿ ಪರಾಭವಗೊಂಡಿದ್ದು, 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದವು.

ಹಿಂದಿನ ತಪ್ಪುಗಳಿಂದ ಪಾಠ ಕಲಿತ ಬಿಸಿಸಿಐ

ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿರುವುದಕ್ಕೆ ಬಿಸಿಸಿಐ ಧನ್ಯವಾದಗಳು ತಿಳಿಸಿದೆ. ಈ ಬಗ್ಗೆ ಟ್ವೀಟ್​​ ಮಾಡಿರುವ ಬಿಸಿಸಿಐ, ಟೆಸ್ಟ್ ತಂಡವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆಗಳು. ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು, ಇದರಲ್ಲಿ 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡರು. ನಿಮ್ಮೆಲ್ಲಾ ಕೊಡುಗೆಗಳಿಗೆ ಧನ್ಯವಾದಗಳು ಎಂದಿದೆ. ಆದ್ರೆ ಬಿಸಿಸಿಐ ಟ್ವೀಟ್​ಗೆ ಟೀಕೆಗಳು ಹರಿದು ಬರುತ್ತಿದೆ.

News First Live Kannada


Leave a Reply

Your email address will not be published. Required fields are marked *