ಮುಂಬೈಕರ್​​​​ಗೆ ಲಂಕಾ ಟೂರ್ ಅತ್ಯಂತ ಮಹತ್ವ.. ವೈಫಲ್ಯ ಕಂಡರೆ ಕಿಕ್​ಔಟ್ ಪಕ್ಕಾ

ಮುಂಬೈಕರ್​​​​ಗೆ ಲಂಕಾ ಟೂರ್ ಅತ್ಯಂತ ಮಹತ್ವ.. ವೈಫಲ್ಯ ಕಂಡರೆ ಕಿಕ್​ಔಟ್ ಪಕ್ಕಾ

ಲಂಕಾ ಸರಣಿ ಪ್ರತಿಯೊಬ್ಬ ಆಟಗಾರನ ಪಾಲಿಗೂ ಡು ಆರ್ ಡೈ..! ಯಾಕಂದ್ರೆ ತಂಡಕ್ಕೆ ಕಮ್​ಬ್ಯಾಕ್ ಮಾಡಿದ ಆಟಗಾರರಿಗೆ ಸ್ಥಾನ ಉಳಿಸಿಕೊಳ್ಳಬೇಕಾದ ಚಾಲೆಂಜ್..! ಇನ್ನು ಯುವ ಆಟಗಾರರಿಗೆ ನಂಬಿಕೆ ಉಳಿಸಿಕೊಳ್ಳುವ ಅಗ್ನಿಪರೀಕ್ಷೆ..! ಮತ್ತೊಂದೆಡೆ ಸವಾಲುಗಳನ್ನ ಮೆಟ್ಟಿನಿಂತಿರುವ ಪೃಥ್ವಿ ಶಾಗೂ, ಈ ಸರಣಿ ಅತ್ಯಂತ ಇಂಪಾರ್ಟೆಂಟ್​ ಟೂರ್ ಅಗಿದೆ.

ಪೃಥ್ವಿ ಶಾ.. ಭಾರತೀಯ ಕ್ರಿಕೆಟ್​​ನ ಟ್ಯಾಲೆಂಟೆಡ್ ಪ್ಲೇಯರ್, ಆ್ಯಂಡ್​ ಯಂಗ್​ ಸೆನ್ಸೇಷನ್.. 21ನೇ ವಯಸ್ಸಿಗೆ ಏಳು-ಬೀಳು ಕಂಡಿರುವ ಪೃಥ್ವಿ, ಟೆಸ್ಟ್​ ಹಾಗೂ ದೇಶಿ ಟಿ20 ಕ್ರಿಕೆಟ್​ನಲ್ಲಿ ಅದ್ಬುತವನ್ನೇ ಸೃಷ್ಟಿಸಿದ್ದಾರೆ. ಆದ್ರೆ ಇನ್​​ ಕನ್ಸಿಸ್ಟೆನ್ಸಿ ಕಾರಣದಿಂದ ತಂಡದಿಂದ ಹೊರಗುಳಿದಿದ್ದ ಫ್ಯೂಚರ್ ಸ್ಟಾರ್​, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿನ ವೈಫಲ್ಯ ಅನುಭವಿಸಿದ್ರು. ಇದೀಗ ಶ್ರೀಲಂಕಾ ಸರಣಿಗೆ ಕಮ್​​​ಬ್ಯಾಕ್ ಮಾಡಿರುವ ಮುಂಬೈಕರ್​ಗೆ, ಇದು ಡು ಆರ್ ಡೈ ಸರಣಿಯೇ ಆಗಿದೆ.

ಹೌದು..! ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಪೃಥ್ವಿ ಶಾ, ತಂಡದಿಂದಲೇ ಗೇಟ್​​ಪಾಸ್ ಪಡೆದಿದ್ದರು.. ಆದ್ರೀಗ ಲಂಕಾ ನಾಡಿನಲ್ಲಿರುವ ಪೃಥ್ವಿಗೆ ಮತ್ತೊಂದು ಚಾಲೆಂಜ್ ಎದುರಾಗಿದೆ. ಆ ಸವಾಲನ್ನ ಯಂಗ್ ಪೃಥ್ವಿ ಹೇಗೆ ಮೆಟ್ಟಿ ನಿಲ್ತಾರೆ..? ಟೀಮ್ ಮ್ಯಾನೇಜ್​ಮೆಂಟ್ ನಂಬಿಕೆ ಹೇಗೆ ಉಳಿಸಿಕೊಳ್ತಾರೆ ಅನ್ನೋದೇ, ಸದ್ಯ ಎಲ್ಲರನ್ನ ಕಾಡ್ತಿರುವ ಪ್ರಶ್ನೆ..!

ವಿಜಯ್ ಹಜಾರೆ, ಐಪಿಎಲ್​​​ನಲ್ಲಿ ಪೃಥ್ವಿ ಶಾ ಮಿಂಚು..!

ಆಸ್ಟ್ರೇಲಿಯಾ ಪ್ರವಾಸದ ಬಳಿಕ ತಂಡದಿಂದ ಗೇಟ್​ಪಾಸ್ ಪಡೆದಿದ್ದ ಪೃಥ್ವಿ ಶಾ, ವಿಜಯ್‌ ಹಜಾರೆ ಟ್ರೊಫಿಯಲ್ಲಿ ಅಕ್ಷರಶಃ ರೌದ್ರಾವತಾರ ಪ್ರದರ್ಶಿಸಿದ್ದರು. ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಿಂದ 827 ರನ್ ಸಿಡಿಸಿದ್ದ ಪೃಥ್ವಿ ಶಾ, ಐತಿಹಾಸವನ್ನೇ ಸೃಷ್ಟಿಸಿದ್ದರು. ಈ ವೇಳೆ ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್​ ಸರಣಿಗೆ ಆಯ್ಕೆ ಆಗೋದು ಗ್ಯಾರಂಟಿ ಅಂತಾನೇ ಊಹಿಸಲಾಗಿತ್ತು. ಆದ್ರೆ ಆಯ್ಕೆ ಸಮಿತಿ ಮುಂಬೈಕರ್​ನನ್ನ ಕೈಬಿಟ್ಟು ನಿರಾಸೆ ಮೂಡಿಸಿತ್ತು.

ಇಂಗ್ಲೆಂಡ್ ಟೆಸ್ಟ್​ ಸರಣಿಯ ಬಳಿಕವೂ ಬ್ಯಾಟ್​​​ನಿಂದ ರನ್​​ಹೊಳೆ ಹರಿಸಿದ ಮುಂಬೈಕರ್, 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್​ನಲ್ಲೂ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. 8 ಇನ್ನಿಂಗ್ಸ್​ಗಳಿಂದ 308 ರನ್ ಕಲೆಹಾಕಿದ್ದ ಪೃಥ್ವಿ ಶಾ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಾಗೂ ಇಂಗ್ಲೆಂಡ್ ಸರಣಿ ವೇಳೆ ಟೀಮ್ ಇಂಡಿಯಾಕ್ಕೆ ಸ್ಟ್ರಾಂಗ್​​ ಕಮ್​​ಬ್ಯಾಕ್ ಮಾಡ್ತಾರೆ ಅಂತ ನಿರೀಕ್ಷಿಸಲಾಗಿತ್ತು. ಆದ್ರೆ ದೇಹ ತೂಕದ ಕಾರಣ, ಪೃಥ್ವಿ ಶಾ ಕನಸು ಮತ್ತೊಮ್ಮೆ ಭಗ್ನಗೊಂಡಿತ್ತು.. ಇಷ್ಟೆಲ್ಲಾ ಸವಾಲು ಮೆಟ್ಟಿನಿಂತಿದ್ದ ಪೃಥ್ವಿ, ಅಂತಿಮವಾಗಿ ಆಯ್ಕೆಯಾಗಿದ್ದು, ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ..!

ಮುಂಬೈಕರ್​​​​ಗೆ ಲಂಕಾ ಟೂರ್ ಅತ್ಯಂತ ಮಹತ್ವ..!

ಹೌದು..! ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಕಂಡಿದ್ದ ಪೃಥ್ವಿ ಶಾಗೆ, ಶ್ರೀಲಂಕಾ ಪ್ರವಾಸ ಬಹುಮುಖ್ಯವಾಗಿದೆ. ಈಗಾಗಲೇ ತಂಡದ ಗೆಸ್ಟ್​ ಓಪನರ್ ಆಗಿರುವ ಪೃಥ್ವಿ, ಖಾಯಂ ನೆಲೆಯೂರಲು ಲಂಕಾ ಸರಣಿಯೇ ವೇದಿಕೆಯಾಗಿದೆ. ಹೀಗಾಗಿ ಲಂಕಾ ಸರಣಿಯಲ್ಲಿ ಅತ್ಯುದ್ಬುತ ಪ್ರದರ್ಶನದ ಆಧಾರದ ಮೇಲೆಯೇ, ಪೃಥ್ವಿ ಶಾ ವೃತ್ತಿ ಜೀವನದ ಭವಿಷ್ಯ ನಿರ್ಧಾರವಾಗಲಿದೆ. ಹಾಗಾಗಿ ಮುಂಬೈಕರ್ ಪೃಥ್ವಿಗೆ, ಈ ಟೂರ್ ಮೋಸ್ಟ್​ ಇಂಪಾರ್ಟೆಂಟ್ ಆಗಿದೆ.

ಮತ್ತಷ್ಟು ಸವಾಲುಗಳ ಜೊತೆ ಕಾಂಪಿಟೇಟ್​ ಮಾಡಬೇಕು ಪೃಥ್ವಿ..!

ಮುಂಬೈಕರ್ ಪೃಥ್ವಿ ಶಾಗೆ, ಬರೀ ಎದುರಾಳಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸವಾಲು ಮಾತ್ರವಲ್ಲ..!! ಜೊತೆಗೆ ಲಂಕಾ ಸರಣಿಗೆ ಆಯ್ಕೆಯಾಗಿರುವ ಯುವ ಆಟಗಾರರ ಜೊತೆಗಿನ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಿದೆ. ದೇವದತ್​ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ಸ್ವತಃ ಡೆಲ್ಲಿ ಕ್ಯಾಪಿಟಲ್ಸ್ ಟೀಮ್​​ಮೆಟ್ ಶಿಖರ್ ಧವನ್​ ಜೊತೆಗೂ ಪೃಥ್ವಿ, ಟಫ್ ಫೈಟ್ ನೀಡಬೇಕಿದೆ. ಅದ್ರಲ್ಲೂ ಟಿ20 ವಿಶ್ವಕಪ್​​ ಟೂರ್ನಿ ದೃಷ್ಟಿಯಿಂದ ಉತ್ತಮ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ. ಇದರಿಂದಾಗಿ ಸಿಕ್ಕ ಚಾನ್ಸ್​ನಲ್ಲೇ ಪೃಥ್ವಿ ಸಾಲಿಡ್ ಪರ್ಫಾಮೆನ್ಸ್ ನೀಡಲೇಬೇಕಿದೆ.

ವೈಫಲ್ಯ ಕಂಡರೆ ತಂಡದಿಂದ ಕಿಕ್​ಔಟ್ ಗ್ಯಾರಂಟಿ..!

ಹೌದು..! ಲಂಕಾ ಸರಣಿಯಲ್ಲಿ ಪೃಥ್ವಿ ಶಾ ಮತ್ತೆ ವೈಫಲ್ಯ ಅನುಭವಿಸಿದರೆ, ಟೀಮ್ ಇಂಡಿಯಾದ ಬಾಗಿಲು ಮತ್ತೆ ಮುಚ್ಚಲ್ಪಡೋದು ಗ್ಯಾರಂಟಿ. ಯಾಕಂದ್ರೆ ಈಗಾಗಲೇ ತಂಡದ ಬಾಗಿಲು ಬಡಿಯುತ್ತಿರುವ ಓಪನರ್​ಗಳ ಪಟ್ಟಿ, ಬಹು ದೊಡ್ಡದಿದೆ. ಲಂಕಾ ಸರಣಿಯಲ್ಲೇ ಬ್ಯಾಕ್ ಅಪ್ ಓಪನರ್​ಗಳು​ ಇಬ್ಬರಿದ್ದಾರೆ. ಹೀಗಾಗಿ ರನ್​ಗಳಿಸಲು ಪೃಥ್ವಿ ಹಿಂದುಳಿದರೆ, ಯುವ ಆಟಗಾರರು ಪೃಥ್ವಿಯನ್ನ ಸೈಡ್​ ಹೊಡೆಯೋದು ಗ್ಯಾರಂಟಿ.. ಅಕಸ್ಮಾತ್ ಪೃಥ್ವಿ ವೈಫಲ್ಯ ಅನುಭವಿಸಿದ್ರೆ, ತಂಡದಿಂದ ಪರ್ಮನೆಂಟ್ ಕೊಕ್ ಗ್ಯಾರೆಂಟಿ..!!
ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪೃಥ್ವಿ ಶಾ, ಯುದ್ಧಕ್ಕೆ ಸಜ್ಜಾಗಿದ್ದಾರೆ. ಲಂಕಾದಲ್ಲಿ ಯಂಗ್​ ಪೃಥ್ವಿ, ಸಿಂಹಳೀಯರ ಬೇಟೆಯಾಡ್ತಾರಾ ಅಥವಾ ಸಿಂಹ ಘರ್ಜನೆಗೆ ಹೆದರಿ ಮೂಲೆ ಸೇರಿಕೊಳ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

The post ಮುಂಬೈಕರ್​​​​ಗೆ ಲಂಕಾ ಟೂರ್ ಅತ್ಯಂತ ಮಹತ್ವ.. ವೈಫಲ್ಯ ಕಂಡರೆ ಕಿಕ್​ಔಟ್ ಪಕ್ಕಾ appeared first on News First Kannada.

Source: newsfirstlive.com

Source link