ಕಾನ್ಪುರ ಟೆಸ್ಟ್ ಬೆನ್ನಲ್ಲೇ, ಇದೀಗ ಕ್ರಿಕೆಟ್ ಪ್ರಿಯರ ಚಿತ್ತ ಮುಂಬೈ ಟೆಸ್ಟ್ನತ್ತ ನೆಟ್ಟಿದೆ. ಮೊದಲ ಟೆಸ್ಟ್ನಲ್ಲಿ ಟೀಮ್ ಇಂಡಿಯಾಕ್ಕೆ ಸರಿಸಮನಾಗಿ ಹೋರಾಡಿದ್ದ ಕಿವೀಸ್ಗೆ, ವಾಂಖೆಡೆ ಮೈದಾನದಲ್ಲಿ ಆಘಾತ ಕಾದಿರೋದು ಸುಳ್ಳಲ್ಲ.! ಅಷ್ಟೇ ಅಲ್ಲ..! ಈ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಗೆಲುವು 100ರಷ್ಟು ಶತಸಿದ್ಧ ಕೂಡ..ಅದ್ಯಾಕೆ ಈ ರಿಪೋರ್ಟ್ ನೋಡಿ..
‘ಇಲ್ಲಿನ ಪಿಚ್, ಸ್ಲೋ ಆ್ಯಂಡ್ ಲೋ ಆಗಿತ್ತು. ಹೇಳಿಕೊಳ್ಳುವಂಥಾ ಬೌನ್ಸ್, ಟರ್ನ್ ಕೂಡ ಇರಲಿಲ್ಲ. ಭಾರತದಂತಹ ಪರಿಸ್ಥಿತಿಗಳಲ್ಲಿ 5ನೇ ದಿನ ಪಿಚ್ಗಳಲ್ಲಿ ಸವೆತ ನಿರೀಕ್ಷಿಸಬಹುದು. ಆದರೆ, ಇಲ್ಲಿನ ವಿಕೆಟ್ನಲ್ಲಿ ಈ ರೀತಿ ಆಗಲಿಲ್ಲ.’
ರಾಹುಲ್ ದ್ರಾವಿಡ್, ಹೆಡ್ಕೋಚ್
‘ಪಿಚ್ಗಳ ಬಗ್ಗೆ ಕೇಳಿದಾಗಲೆಲ್ಲಾ ಅದು ವಿವಾದಕ್ಕೆ ತಿರುಗುತ್ತದೆ. ಆದ್ದರಿಂದ ನಾನು ಇದರ ಬಗ್ಗೆ ಮಾತನಾಡದೆ ಸುಮ್ಮನಿರುತ್ತೇನೆ.’
ಆರ್.ಅಶ್ವಿನ್, ಆಫ್ ಸ್ಪಿನ್ನರ್
ಕಾನ್ಪುರ ಪಿಚ್ ಸ್ಪೋರ್ಟೀವ್ ಪಿಚ್ ಅನ್ನೋದ್ರಲ್ಲಿ ಅನುಮಾನ ಇಲ್ಲ. ಆದ್ರೆ ಇದೇ ಗ್ರೀನ್ ಪಾರ್ಕ್ ಪಿಚ್, ಟೀಮ್ ಇಂಡಿಯಾ ಗೆಲುವಿಗೆ ಮುಳುವಾಗಿದ್ದು, ಸುಳ್ಳಲ್ಲ. ಸೆಷನ್ ಟು ಸೆಷನ್ ಪಿಚ್, ವಿಭಿನ್ನವಾಗಿ ವರ್ತಿಸುತ್ತಿತ್ತು. ನಾಲ್ಕನೇ ಹಾಗೂ 5ನೇ ದಿನಾ ಬಾಲ್ ಟರ್ನ್ ಆಗುತ್ತೆ ಅಂತಾನೇ ನಿರೀಕ್ಷಿಸಲಾಗಿತ್ತು.. ಆದ್ರೆ ಆಗಿದ್ದೇ ಬೇರೆ. ಮಹತ್ವದ ಎರಡು ದಿನ ಬಾಲ್ ಸ್ಲೋ & ಲೋ ಆಗಿದ್ದು ಬಿಟ್ಟರೆ, ಈ ಪಿಚ್ನಿಂದ ಟೀಮ್ ಇಂಡಿಯಾಕ್ಕೆ ಲಾಭವಾಗಲಿಲ್ಲ.
ವಾಂಖೆಡೆಯಲ್ಲಿ ಟರ್ನಿಂಗ್ ಟ್ರ್ಯಾಕ್ ರೆಡಿ..
ಯೆಸ್..! ಮುಂಬೈನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್, ಉಭಯ ತಂಡಗಳಿಗೂ ಪ್ರತಿಷ್ಠಿತ ಪಂದ್ಯವಾಗಿದೆ. ಸರಣಿ ಗೆಲುವಿನ ದೃಷ್ಟಿಯಲ್ಲಿ, ಮಾಡು ಇಲ್ಲವೇ ಮಡಿ ಪಂದ್ಯವೇ ಆಗಿದೆ. ಹಾಗಾಗಿ ಇಲ್ಲಿನ ಪಿಚ್ ಯಾವ ರೀತಿ ಇರಲಿದೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದ್ರೆ, ಕಾನ್ಪುರಕ್ಕೆ ಹೋಲಿಸಿದ್ರೆ, ವಾಂಖೆಡೆ ಪಿಚ್, ಸಂಪೂರ್ಣ ಡಿಫರೆಂಟ್ ಆಗಿರುತ್ತೆ ಅಂತಾನೇ ಹೇಳಲಾಗ್ತಿದೆ. ವಾಖೆಂಡೆಯಲ್ಲಿ ಟರ್ನಿಂಗ್ ಟ್ರ್ಯಾಕ್ ಪಿಚ್ ಅನ್ನ, ಕ್ಯುರೇಟರ್ ರೆಡಿ ಮಾಡ್ತಿದ್ದಾರೆ.
3-4 ದಿನಗಳಲ್ಲೇ ಮುಕ್ತಾಯವಾಗುತ್ತಾ ಮುಂಬೈ ಟೆಸ್ಟ್..?
ಮುಂಬೈನ ವಾಂಖೆಡೆಯಲ್ಲಿ ಸ್ಪಿನ್ ದರ್ಬಾರ್ ನಡೆದರೆ, ಅಂತಿಮ ಪಂದ್ಯ ಮೂರ್ನಾಲ್ಕು ದಿನಗಳಲ್ಲೇ ಅಂತ್ಯ ಕಾಣೋದು ಗ್ಯಾರಂಟಿ. ಯಾಕಂದ್ರೆ, ಈಗಾಗಲೇ ಟೀಮ್ ಇಂಡಿಯಾ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್, ಆರ್.ಅಶ್ವಿನ್, ಜಡೇಜಾ, ಉತ್ತಮ ಲಯದಲ್ಲಿದ್ದಾರೆ. ಇಂಥದ್ರಲ್ಲಿ ಕೊಂಚ ಟರ್ನ್ ಸಿಕ್ಕಿದರೂ ತ್ರಿಮೂರ್ತಿ ಜೋಡಿ, ಎದುರಾಳಿಯನ್ನ ಗಿರಗಿಟ್ಲೆ ಆಡಿಸ್ತಾರೆ.
2ನೇ ಟೆಸ್ಟ್ನಲ್ಲಿ ನ್ಯೂಜಿಲೆಂಡ್ಗೆ ಕಾದಿದೆ ಮಾರಿಹಬ್ಬ..!
ಕಾನ್ಪುರದಲ್ಲಿ ಕಿವೀಸ್, ಟೀಮ್ ಇಂಡಿಯಾಕ್ಕೆ ಟಫ್ ಫೈಟ್ ನೀಡಿದೆ ನಿಜ.! ಪ್ರಮುಖವಾಗಿ ಆರಂಭಿಕ ಟಾಮ್ ಲಾಥಮ್, ಚೊಚ್ಚಲ ಭಾರತ ಪ್ರವಾಸ ಕೈಗೊಂಡಿರುವ ವಿಲ್ ಯಂಗ್, ಸ್ಪಿನ್ನರ್ಗಳನ್ನ ಸಮರ್ಥವಾಗಿ ಎದುರಿಸಿದ್ದಾರೆ. ಇನ್ನು ರಚಿನ್ ರವೀಂದ್ರ, ಇಂಡಿಯನ್ ಸ್ಪಿನ್ನರ್ಗಳ ಬಗ್ಗೆ ಕಿಂಚಿತ್ತು ಟೆನ್ಶನ್ ಇಲ್ಲದೆ ಬ್ಯಾಟ್ ಬೀಸಿದ್ದರು.. ಅಷ್ಟೇ ಯಾಕೆ, ನೈಟ್ ವಾಚ್ಮನ್ ಆಗಿ ಬಂದಿದ್ದ ಸೋಮರ್ವಿಲ್ಲೆ ಕೂಡ, ಟೀಮ್ ಇಂಡಿಯಾ ಸ್ಪಿನ್ನರ್ಗಳನ್ನ ಕಾಡಿದ್ರು. ಇದಕ್ಕೆ ಕಾರಣ, ಕಾನ್ಪುರ ಪಿಚ್..
ಆದ್ರೆ, ಮುಂಬೈ ಪಿಚ್ ಟರ್ನಿಂಗ್ ಟ್ರ್ಯಾಕ್ ಆಗಿರಲಿದೆ. ಹೀಗಾಗಿ ಕಿವೀಸ್ ಬ್ಯಾಟ್ಸ್ಮನ್ಗಳಿಗೆ ಒಂದೊಂದು ಎಸೆತವೂ ಅಗ್ನಿಪರೀಕ್ಷೆಯೇ ಅಗಿರಲಿದೆ. ಇದರಾರ್ಥ ಮುಂಬೈನಲ್ಲಿ ಕಿವೀಸ್ಗೆ ಮಾರಿಹಬ್ಬ ಕಾದಿದೆ.. ಟೀಮ್ ಇಂಡಿಯಾದ ಗೆಲುವು ಖಚಿತ ಅನ್ನೋದರಲ್ಲಿ ನೋ ಡೌಟ್.
💬 💬 “We can take a lot of positives from the first Test.”#TeamIndia Bowling Coach Paras Mhambrey reflects on the side’s performance in the first @Paytm #INDvNZ Test in Kanpur. pic.twitter.com/fcE1CnsAJr
— BCCI (@BCCI) December 1, 2021