ಮುಂಬೈನಲ್ಲಿ ಶೇಕಡಾ 3ರಷ್ಟು ಡಿವೋರ್ಸ್​ಗಳು ಟ್ರಾಫಿಕ್ ಜಾಮ್​ನಿಂದ ಅಗುತ್ತಿವೆ ಅಂತ ಹೇಳಿ ಟ್ರೋಲ್​ಗೊಳಗಾದರು ಅಮೃತಾ ಫಡ್ನವಿಸ್! | Devendra Fadnavis’ wife heavily trolled over her 3% divorces in Mumbai due traffic jam ARBs comment!!


ಮುಂಬೈನಲ್ಲಿ ಶೇಕಡಾ 3ರಷ್ಟು ಡಿವೋರ್ಸ್​ಗಳು ಟ್ರಾಫಿಕ್ ಜಾಮ್​ನಿಂದ ಅಗುತ್ತಿವೆ ಅಂತ ಹೇಳಿ ಟ್ರೋಲ್​ಗೊಳಗಾದರು ಅಮೃತಾ ಫಡ್ನವಿಸ್!

ಅಮೃತಾ ಫಡ್ನವಿಸ್

ಡಿವೋರ್ಸ್ (divorce) ಮತ್ತು ಟ್ರಾಫಿಕ್ ಜಾಮ್ (traffic congestion) ನಡುವೆ ಎತ್ತಣ ಸಂಬಂಧ ಮಾರಾಯ್ರೇ! ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅವರು ಪತ್ನಿ ಅಮೃತಾ ಫಡ್ನವಿಸ್ (Amrita Fadnavis) ಅವರು, ಖಂಡಿತಾ ಸಂಬಂಧವಿದೆ, ಮುಂಬೈಯಲ್ಲಿ ಜರುಗುವ ಟ್ರಾಫಿಕ್ ಸಮಸ್ಯೆಯಿಂದ ಡಿವೋರ್ಸ್ ಗಳು ಆಗುತ್ತಿವೆ ಎಂದು ಅವರು ಹೇಳಿದ್ದಾರೆ. ಅವರು ಯಾವ ಅಧ್ಯಯನವನ್ನು ಆಧಾರವಾಗಿಟ್ಟುಕೊಂಡು ಇದನ್ನು ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ಆದರೆ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಮೀಮ್ಗಳಿಗೆ ಕಾರಣವಾಗಿರುವುದಂತೂ ಸತ್ಯ ಮಾರಾಯ್ರೇ. ಶನಿವಾರ ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅಮೃತಾ ಅವರು ಮಹಾನಗರದ ರಸ್ತೆಗುಂಡಿ ಮತ್ತು ಟ್ರಾಫಿಕ್ ಜಾಮ್ಗಳು ಶೇಕಡಾ 3ರಷ್ಟು ಡಿವೋರ್ಸ್ ಗಳಿಗೆ ಕಾರಣವಾಗುತ್ತಿವೆ ಎಂದು ಹೇಳಿದರು. ಮುಂಬೈ ನಗರದ ಹದೆಗೆಟ್ಟ ರಸ್ತೆಗಳು ಮತ್ತು ಮುರಿದು ಬೀಳುತ್ತಿರುವ ವೈವಾಹಿಕ ಸಂಬಂಧಗಳ ನಡುವೆ ತಳುಕು ಹಾಕುವ ಅವರ ಕೌತುಕಮಯ ಮತ್ತು ಅಚ್ಚರಿ ಹುಟ್ಟಿಸುವ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳ ಮಹಾಪೂರ ಹರಿಯುವಂತೆ ಮಾಡಿದೆ. ಕೆಲವರು ಅಮೃತಾ ಅವರನ್ನು ಲೇವಡಿ ಮಾಡುವ ಹಾಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಮೇಡಂಗೆ ಡಾಟಾ ಸಿಕ್ಕಿದ್ದು ಎಲ್ಲಿಂದ ಅಂತ ಕೇಳಿದ್ದಾರೆ.

ಒಬ್ಬ ಟ್ವಿಟರ್ ಬಳಕೆದಾರ, ಗಂಡ ಬೇಗ ಮನೆಗೆ ಬಂದಾಗ ಪತ್ನಿ ಮತ್ತೊಬ್ಬನ ತೆಕ್ಕೆಯಲ್ಲಿದ್ದಿದನ್ನು ಕಂಡು ಡಿವೋರ್ಸ್ ಆಗಿರುವ ಪ್ರಕರಣಗಳ ಬಗ್ಗೆ ನಾನು ಕೇಳಿದ್ದೇನೆ. ಅದಕ್ಕೆ ನೀವು ಉತ್ತಮ ರಸ್ತೆಗಳನ್ನು ದೂಷಿಸಬೇಕೇ ಹೊರತು ಟ್ರಾಫಿಕ್ ಜಾಮ್ ಗಳನ್ನಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರನಲ್ಲಿ ಶಿವ ಸೇನೆ ಪಕ್ಷದ ಧುರೀಣೆಯಾಗಿರುವ ಪ್ರಿಯಾಂಕ ಚತುರ್ವೇದಿ ಅವರು ಅಮೃತಾ ಫಡ್ನವಿಸ್ ಅವರ ಹೇಳಿಕೆ ಅತಾರ್ಕಿಕವಾಗಿದೆ ಎಂದಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ ಅಂತ ಬೆಂಗಳೂರಿನ ನಿವಾಸಿಗಳಿಗೆ ಹೇಳಿರುವ ಅವರು ಹಾಗೆ ಮಾಡಿದ್ದೇಯಾದರೆ ಅವರ ವೈವಾಹಿಕ ಜೀವನ ತೊಂದರೆ ಸಿಕ್ಕಬಹುದು ಅವರು ಎಚ್ಚರಿಸಿದ್ದಾರೆ.

ಶೇಕಡಾ ಮೂರರಷ್ಟು ಮುಂಬೈ ನಿವಾಸಿಗಳು ರಸ್ತೆ ಮೇಲಿನ ಟ್ರಾಫಿಕ್ ನಿಂದಾಗಿ ತಮ್ಮ ಸಂಗಾತಿಗೆ ಡಿವೋರ್ಸ್ ನೀಡುತ್ತಿದ್ದಾರೆ ಎಂದು ಹೇಳುವ ಈ ಮಹಿಳೆಗೆ ದಿನದ ಅತ್ಯುತ್ತಮ ಅತಾರ್ಕಿಕ ಮಾತಿನ ಪ್ರಶಸ್ತಿ ನೀಡಬೇಕು. ನಿಮ್ಮ ಮೆದುಳಿಗೆ ಬ್ರೇಕ್ ನೀಡುವ ಬದಲು ಹಾಲಿಡೇ ಬ್ರೇಕ್ ತಗೊಳ್ಳಿ. ಬೆಂಗಳೂರಲ್ಲಿ ವಾಸ ಮಾಡುವ ಕುಟುಂಬಗಳು ಅವರ ಹೇಳಿಕೆಯನ್ನು ಓದುವ ಗೋಜಿಗೆ ಹೋಗಬೇಡಿ, ಅದು ನಿಮ್ಮ ವಿವಾಹಕ್ಕೆ ಮಾರಕವಾಗಿ ಪರಿಣಮಿಸಬಹುದು ಅಂತ ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ವ್ಯಕ್ತಿ ಅಮೃತಾ ಅವರಿಗೆ ಒಮ್ಮೆ ದೇಶ ಪರ್ಯಟನೆ ಮಾಡುವ ಸಲಹೆ ನೀಡಿರುವರಾದರೂ ಯಾಕೆ ಅಂತ ಕಾರಣ ತಿಳಿಸಿಲ್ಲ.

ಇನ್ನೂ ಕೆಲ ಸ್ವಾರಸ್ಯಕರ ಮೀಮ್ಗಳು ಇಲ್ಲಿವೆ.

ಇದನ್ನೂ ನೋಡಿ.

ಅಮೃತಾ ಅವರು ಏನು ಹೇಳಿದ್ದರು ಅನ್ನವುದನ್ನೂ ತಿಳಿದುಕೊಂಡು ಬಿಡೋಣ.

‘ನಾನು ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅನ್ನೋದನ್ನು ಮರೆತು ಬಿಡಿ. ಒಬ್ಬ ಮಹಿಳೆಯಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಟ್ರಾಫಿಕ್ ಸಮಸ್ಯೆ ಮತ್ತು ರಸ್ತೆಗುಂಡಿಗಳನ್ನು ನಮಗೆ ಯಾವ ಮಟ್ಟಿಗೆ ತೊಂದರೆ ನೀಡುತ್ತವೆ ಅನ್ನೋದನ್ನು ಅನುಭವಿಸಿದ್ದೇನೆ. ನಿಮಗೊಂದು ವಿಷಯ ಗೊತ್ತಾ? ಮುಂಬೈಯಲ್ಲಿ ಶೇಕಡಾ ಮೂರರಷ್ಟು ಡಿವೋರ್ಸ್ಗಳು ಟ್ರಾಫಿಕ್ ಜಾಮ್ ಗಳಿಂದಾಗುತ್ತಿವೆ, ಯಾಕೆಂದರೆ ಅವರು ತಮ್ಮ ಕುಟುಂಬಗಳಿಗೆ ಸಾಕಷ್ಟು ಸಮಯವನ್ನು ನೀಡುತ್ತಿಲ್ಲ’ ಎಂದು ಅವರು ಹೇಳಿದ್ದರು.

TV9 Kannada


Leave a Reply

Your email address will not be published.