ಮುಂಬೈ: ಮುಂಬೈನಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ರನ್ನು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಭೇಟಿಯಾಗಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಸದ್ಯ ಎಸ್‌ಐಟಿ ತಂಡದ ಮುಂದೆ ಆರೋಪಿಗಳು ಹಾಜರಾದ ಕಾರಣ.. ಆದಷ್ಟು ಬೇಗ, ಪ್ರಕರಣದಿಂದ ಹೊರ ಬಂದು ಮತ್ತೆ ಸಂಪುಟ ಸೇರಲು ಸರ್ಕಾರದ ಮೇಲೆ ಪರೋಕ್ಷವಾಗಿ ಒತ್ತಡ ಹೇರಲು ಸಾಹುಕಾರ್ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಬೆನ್ನಲ್ಲೇ ಮುಂಬೈಗೆ ತೆರಳಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.

ಫಡ್ನವಿಸ್ ಭೇಟಿ ವೇಳೆ ಪ್ರಕರಣದ ವಿಚಾರವನ್ನ ಪ್ರಸ್ತಾಪಿಸಿದ ರಮೇಶ್ ಜಾರಕಿಹೊಳಿ.. ಸದ್ಯ ನನ್ನ ವಿರುದ್ಧದ ಪ್ರಕರಣದಲ್ಲಿ ಆರೋಪಿಗಳು ಎಸ್‌ಐಟಿ ತಂಡದ ಮುಂದೆ ಉಪಸ್ಥಿತರಿದ್ದಾರೆ. ಕಳೆದ 5 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಈಗ ಬಂದಿದ್ದಾರೆ. ಎಸ್‌ಐಟಿ ತಂಡದಿಂದ ನನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದೇನೆ. ಈಗ ಪ್ರಕರಣದಲ್ಲಿ ನಾನು ನಿರಾಪರಾಧಿ. ಈ ನಿಟ್ಟಿನಲ್ಲಿ ಮತ್ತೆ ನನ್ನನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕು. ಈ ವಿಚಾರವನ್ನು ನೀವು ನೇರವಾಗಿ ಹೈಕಮಾಂಡ್ ನಾಯಕರಿಗೆ ತಲುಪಿಸಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.

The post ಮುಂಬೈನಲ್ಲಿ ಸಾಹುಕಾರ ಸ್ಕೆಚ್; ಇದ್ದಕ್ಕಿದ್ದಂತೆ ದೇವೇಂದ್ರ ಫಡ್ನವಿಸ್ ಭೇಟಿಯಾದ ರಮೇಶ್ appeared first on News First Kannada.

Source: newsfirstlive.com

Source link