ಮುಂಬೈನ ಪೊವೈನಲ್ಲಿ ಮೊಮೊಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ; ಇಲ್ಲಿದೆ ವೈರಲ್ ವಿಡಿಯೋ | Momos in Town of Pomai in Mumbai between two groups; Here’s the viral video


ಮುಂಬೈನ ಪೊವೈನಲ್ಲಿ ಮೊಮೊಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ; ಇಲ್ಲಿದೆ ವೈರಲ್ ವಿಡಿಯೋ

ಮೊಮೊಸ್​ಗಾಗಿ ಗಲಾಟೆ

ಮುಂಬೈ: ನಗರದಲ್ಲಿ ಮೊಮೊಸ್ (Momos) ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ವಿಚಿತ್ರ ಘಟನೆ ನಡೆದಿದೆ. ಹೌದು. ನೀವು ಓದಿರುವುದು ಸರಿಯಾಗಿಯೇ ಇದೆ. ನಾವು ಹೇಳುತ್ತಿರುವುದು ಕೂಡ ಸರಿಯಾಗಿದೆ. ಟಿಬೆಟಿಯನ್-ನೇಪಾಳಿ ಚಾಟ್​ ತಿಂಡಿ ನಗರದ ಪೊವೈ ಪ್ರದೇಶದಲ್ಲಿ  ಮೊಮೊಸ್ ಮಾರಾಟ ಮಾಡುವ ಎರಡು ಗುಂಪುಗಳ ನಡುವೆ ಕಾದಾಟಕ್ಕೆ ಕಾರಣವಾದ ಸ್ಥಳವಾಗಿದೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಪೊವೈನ ಶಂಕರಾಚಾರ್ಯ ಮಾರ್ಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಪರಸ್ಪರ ಲಾಠಿ ಪ್ರಹಾರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ, ಜನರು, ಕಾರುಗಳು ರಸ್ತೆಯಲ್ಲಿ ಹಾದು ಹೋಗುತ್ತಿದ್ದರು ಎರಡು ಗುಂಪುಗಳು ಪರಸ್ಪರ ಲಾಠಿಯಿಂದ ಹೊಡೆದುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಸುಮಾರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

TV9 Kannada


Leave a Reply

Your email address will not be published.