ಮುಂಬೈನ ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್​​ನಲ್ಲಿ ಬೆಂಕಿ; 8 ಅಗ್ನಿಶಾಮಕ ವಾಹನಗಳು ದೌಡು | Huge fire broke out at the Samsung service centre in Mumbai suburb Kanjurmarg


ಮುಂಬೈನ ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್​​ನಲ್ಲಿ ಬೆಂಕಿ; 8 ಅಗ್ನಿಶಾಮಕ ವಾಹನಗಳು ದೌಡು

ಮುಂಬೈನ ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್​​ನಲ್ಲಿ ಬೆಂಕಿ

ಮುಂಬೈ: ಮುಂಬೈ ಉಪನಗರ ಕಂಜುರ್ಮಾರ್ಗ್‌ನಲ್ಲಿರುವ (Kanjurmarg )ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್​​ನಲ್ಲಿ(Samsung service centre) ಸೋಮವಾರ ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಎಂಟು ಅಗ್ನಿಶಾಮಕ ವಾಹನಗಳು ಮತ್ತು ನಾಲ್ಕು ನೀರಿನ ಟ್ಯಾಂಕರ್‌ಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿವೆ. ಉರಿಯುತ್ತಿರುವ ಬೆಂಕಿಯ ನಡುವೆ ಮುಂಬೈ ಸ್ಕೈಲೈನ್‌ ಮುಂದೆ ದಟ್ಟಹೊಗೆ ಕಾಣಿಸಿಕೊಂಡಿದೆ. ಕಂಜುರ್ಮಾರ್ಗ್ ಪೂರ್ವ ಪೊಲೀಸ್ ಠಾಣೆ ಬಳಿಯ ಸ್ಯಾಮ್ ಸಂಗ್ ಸರ್ವೀಸ್  ಸೆಂಟರ್ ನಲ್ಲಿ  2 ನೇ ಹಂತದ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 8.59ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಮುಂಬೈ ಅಗ್ನಿಶಾಮಕ ದಳ 8 ಅಗ್ನಿಶಾಮಕ ವಾಹನಗಳು, 4 ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಧಾವಿಸಿವೆ. ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)

TV9 Kannada


Leave a Reply

Your email address will not be published. Required fields are marked *