ರಿಲಯನ್ಸ್ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ​,​​ ತಮ್ಮ ಆಟಗಾರರಿಗಾಗಿ ಪ್ರತ್ಯೇಕ ಚಾರ್ಟರ್​ ಫ್ಲೈಟ್​ಗಳ ಏರ್ಪಾಟಿಗೆ ಮುಂದಾಗಿದೆ. ಅಷ್ಟೇ ಅಲ್ಲ, ಒಂದೇ ದೇಶದ ಆಟಗಾರರು ಇತರ ಫ್ರಾಂಚೈಸಿಗಳಲ್ಲಿ ಆಡುತ್ತಿದ್ದು, ಅವರಿಗೂ ತಮ್ಮ ತಂಡದ ಆಟಗಾರರೊಂದಿಗೆ ಕಳುಹಿಸಿಕೊಡಲು ಸಿದ್ಧತೆ ನಡೆಸಿದೆ.

ಮುಂಬೈ ತಂಡದಲ್ಲಿ ಯುಕೆ ಆಟಗಾರರು ಇಲ್ಲದ ಕಾರಣ, ಅಲ್ಲಿಗೆ ಯಾವುದೇ ವಿಮಾನವನ್ನು ಕಳುಹಿಸುವ ವ್ಯವಸ್ಥೆ ಮಾಡಿಲ್ಲ. ಆದರೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಕೆರಿಬಿಯನ್ ಆಟಗಾರರಿಗೆ ಈ ವ್ಯವಸ್ಥೆ ಮಾಡಲಾಗುತ್ತದೆ.

ಮಾಲ್ಡೀವ್ಸ್​​​ನಲ್ಲಿ ತಂಗಿರುವ​ ಆಸಿಸ್​ ಆಟಗಾರರು!

ಭಾರತ-ಆಸ್ಟ್ರೇಲಿಯಾ ನಡುವೆ ಮೇ 15ರವರೆಗೆ ವಿಮಾನಯಾನ ಸೇವೆಗೆ ನಿಷೇಧ ಹೇರಿದೆ. ಹೀಗಾಗಿ ಅಲ್ಲಿಯವರೆಗೂ ಆಟಗಾರರು, ಕಾಮೆಂಟೇಟರ್ಸ್​ ಸೇರಿದಂತೆ 40 ಮಂದಿ ಭಾರತದಲ್ಲೇ ಉಳಿಯುವ ಪರಿಸ್ಥಿತಿ ಬಂದಿತ್ತು. ನಂತರ ಕ್ರಿಕೆಟ್​ ಆಸ್ಟ್ರೇಲಿಯಾ, ಬಿಸಿಸಿಐ ಜೊತೆ ಮಾತುಕತೆ ನಡೆಸಿ ಚಾರ್ಟರ್​ಫ್ಲೈಟ್​ಗಳ ಮೂಲಕ ಆಸಿಸ್​​​ ಆಟಗಾರರನ್ನು ಮಾಲ್ಡೀವ್ಸ್​ಗೆ ಕಳುಹಿಸಿಕೊಡಲಾಗಿದೆ. ಕೆಲ ದಿನಗಳ ಕಾಲ ಅಲ್ಲಿಯೇ ತಂಗಬೇಕಿದೆ. ಆದರೆ ಪಾಸಿಟಿವ್​ ಕಾಣಿಸಿಕೊಂಡ ಚೆನ್ನೈ ತಂಡದ ಮೈಕ್​ ಹಸ್ಸಿ, ಗುಣಮುಖರಾಗುವವರೆಗೆ ಇಂಡಿಯಾದಲ್ಲೇ ಇರಬೇಕಿದೆ.

The post ಮುಂಬೈ ಇಂಡಿಯನ್ಸ್​​ನಿಂದ ವಿದೇಶಿ ಕ್ರಿಕೆಟಿಗರಿಗೆ ಚಾರ್ಟೆಡ್​ ಫ್ಲೈಟ್ಸ್​​ ವ್ಯವಸ್ಥೆ- ಮಾಲ್ಡೀವ್ಸ್​​​ನಲ್ಲಿ ಆಸಿಸ್​ ಆಟಗಾರರು! appeared first on News First Kannada.

Source: newsfirstlive.com

Source link