ಸೆಲೆಬ್ರಿಟಿಗಳು ಅಂದ್ರೆ ದುಬಾರಿ ಮತ್ತು ಬ್ರ್ಯಾಂಡೆಡ್ ಬಟ್ಟೆಗಳನ್ನ ಧರಿಸೋದಕ್ಕೆ ಹೆಸರುವಾಸಿ. ಅದೇ ರೀತಿ ಟ್ರೆಂಡಿ ಔಟ್ಫಿಟ್ಸ್ ಧರಿಸೋದು ಅವರ ವೃತ್ತಿ ಜೀವನಕ್ಕೆ ಅನಿವಾರ್ಯ ಕೂಡ. ಈ ವಿಚಾರದಲ್ಲಿ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸಖತ್ ಸುದ್ದಿ ಮಾಡುತ್ತಾರೆ. ಇತ್ತೀಚೆಗೆ ಅವರು ಏರ್ಪೋರ್ಟ್ಗೆ ಧರಿಸಿದ ಬಂದ ಹಸಿರು ಪೈಜಾಮಾದ ಬೆಲೆ ಕೇಳಿ ಜನಸಾಮಾನ್ಯರಿಗೆ ಶಾಕ್ ಆಗಿದೆ.
ಇತ್ತೀಚೆಗೆ ಕತ್ರಿನಾ ಮುಂಬೈ ಏರ್ಪೋರ್ಟ್ಗೆ ವಿಕ್ಟೋರಿಯಾ ಬೇಕಮ್ ಲೇಬಲ್ ಇರುವ ಹಸಿರು ಬಣ್ಣದ ಪೈಜಾಮಾ ಧರಿಸಿ ಬಂದಿದ್ದರು. ಇದು ಫ್ಯಾಶನ್ ಪ್ರಿಯರ ಗಮನಸೆಳೆದಿತ್ತು. ಇದೀಗ ಅದರ ಬೆಲೆಯಿಂದ ಮತ್ತೆ ಕತ್ರಿನಾ ಸುದ್ದಿಯಾಗಿದ್ದಾರೆ. ಕತ್ರಿನಾ ಧರಿಸಿದ್ದ ಪೈಜಾಮಾದ ಒಟ್ಟು ಬೆಲೆ ಬರೋಬ್ಬರಿ 1,07,600 ರೂಗಳು. ಇದನ್ನು ಗಮನಿಸಿದ ಫ್ಯಾಶನ್ ಪ್ರಿಯರು ಹುಬ್ಬೇರಿಸಿದ್ದಾರೆ.