‘ಮುಂಬೈ ಕರ್ನಾಟಕ’ದ ಹೆಸರು ಬದಲಾವಣೆಗೆ ಸಂಪುಟ ಅಸ್ತು- ಹೊಸ ಹೆಸರು ಏನು ಗೊತ್ತಾ..?


ಬೆಂಗಳೂರು: ಉತ್ತರ ಕನ್ನಡ, ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ‌ ಜಿಲ್ಲೆಗಳನ್ನ ಈ ಹಿಂದೆ ಮುಂಬೈ ಕರ್ನಾಟಕ ಎಂದು ಕರೆಯಲಾಗಿತ್ತು. ಇದೀಗ ಮುಂಬೈ ಕರ್ನಾಟಕದ ಹೆಸರು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಅಂತಾ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಬೊಮ್ಮಾಯಿ ಅವರೇ ಉತ್ತರ ಕೊಡ್ತಾರೆ
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಕಿತ್ತೂರು ಕರ್ನಾಟಕ’ವೆಂದು ಹೊಸ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ವಿಚಾರ ಚರ್ಚೆಯಾಗಿಲ್ಲ. ಚರ್ಚಿಸಲು ನಮ್ಮ ಮುಂದೆ ಯಾವುದೇ ವಿಷಯವಿಲ್ಲ. ಎಲ್ಲಾ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಲು ಬರಲ್ಲ. ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ಇ.ಡಿ ತನಿಖೆಗೆ ವಹಿಸಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.

ಆಗ ನಾನು ಕಾನೂನು ಸಚಿವನಾಗಿರಲಿಲ್ಲ. ಬೊಮ್ಮಾಯಿ ಅವರೇ ಕಾನೂನು ಸಚಿವರಾಗಿದ್ರು. ಸಿಎಂ ಅವರೇ ನಿಮಗೆ ಉತ್ತರ ಕೊಡ್ತಾರೆ ಎಂದಿದ್ದಾರೆ. ಇದೇ ವೇಳೆ ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಮಾತನಾಡಿ.. ಇವತ್ತು ಸಭೆ ನಡೆಯಬೇಕಾಗಿತ್ತು, ಆಗಲಿಲ್ಲ. ಮುಂದಿನ ವಾರ ಅದರ ಬಗ್ಗೆ ಸಭೆ ಮಾಡುತ್ತೇವೆ. ನಂತರ ಒಂದು ನಿರ್ಧಾರ ತೆಗೆದುಕೊಳ್ತೇವೆ ಎಂದು ತಿಳಿಸಿದರು.

News First Live Kannada


Leave a Reply

Your email address will not be published. Required fields are marked *