ಮುಂಬೈ ಟೆಸ್ಟ್​​ DAY 1 : ಸಂಕಷ್ಟದಲ್ಲಿರುವ ಟೀಮ್ ಇಂಡಿಯಾಕ್ಕೆ ಮಯಾಂಕ್ ಆಸರೆ


ಮುಂಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಮಳೆಯಾಟದ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್​ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್, ಶುಭ್​ಮನ್ ಗಿಲ್ ಉತ್ತಮ ಆರಂಭ ನೀಡಿದರು.

ಮೊದಲ ವಿಕೆಟ್​ಗೆ 80 ರನ್​​ಗಳ ಭದ್ರ ಅಡಿಪಾಯ ಹಾಕಿ ಬಿಗ್ ಇನ್ನಿಂಗ್ಸ್​ ಕಟ್ಟುವ ಮುನ್ಸೂಚನೆ ನೀಡಿದ್ದರು. ಆದ್ರೆ, ಈ ವೇಳೆ 44 ರನ್ ಗಳಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಶುಭ್​ಮನ್, ಅಜಾಜ್ ಪಟೇಲ್ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿದ್ದ ರಾಸ್ ಟೇಲರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಬಳಿಕ ಬಂದ ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ, ನಾಯಕ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದರು. ಇದರೊಂದಿಗೆ 80 ರನ್​​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇನ್ನೂ ಕೊಹ್ಲಿ ನಿರ್ಗಮನದ ಬಳಿಕ ಮಯಾಂಕ್ ಜೊತೆಗೂಡಿರುವ ಶ್ರೇಯಸ್ ತಂಡಕ್ಕೆ ನೆರವಾಗುವ ಭರವಸೆ ಮೂಡಿಸಿದ್ರೆ. 2ನೇ ಸೆಷನ್ ಮುಕ್ತಾಯಕ್ಕೂ ಮುನ್ನ ಅರ್ಧಶತಕ ಸಿಡಿಸಿದ ಮಯಾಂಕ್, ಬಿಗ್​ ಇನ್ನಿಂಗ್ಸ್​ ಕಟ್ಟುವ ಸೂಚನೆ ನೀಡಿದ್ದಾರೆ. ಸದ್ಯ 2ನೇ ಸೆಷನ್ ಮುಕ್ತಾಯಕ್ಕೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ. ಮಯಾಂಕ್ ಅಜೇಯ 52 ರನ್, ಶ್ರೇಯಸ್​ 7 ರನ್ ಕ್ರಿಸ್​​ನಲ್ಲಿದ್ದಾರೆ.

The post ಮುಂಬೈ ಟೆಸ್ಟ್​​ DAY 1 : ಸಂಕಷ್ಟದಲ್ಲಿರುವ ಟೀಮ್ ಇಂಡಿಯಾಕ್ಕೆ ಮಯಾಂಕ್ ಆಸರೆ appeared first on News First Kannada.

News First Live Kannada


Leave a Reply

Your email address will not be published. Required fields are marked *