ಮುಂಬೈನ ಟೆಸ್ಟ್ನ ಮೊದಲ ಇನ್ನಿಂಗ್ಸ್ ಟೀಮ್ ಇಂಡಿಯಾ 325 ರನ್ ಗಳಿಗೆ ಆಲೌಟ್ ಆಗಿದೆ. 4 ವಿಕೆಟ್ 221 ರನ್ನೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ವೃದ್ದಿಮಾನ್ ಸಾಹ, ಅಶ್ವಿನ್ ವಿಕೆಟ್ ಕಳೆದುಕೊಂಡಿತ್ತು. ಇದರೊಂದಿಗೆ 224 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಯಾಂಕ್-ಅಕ್ಷರ್, 7ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದರು.. ಆದ್ರೆ, ಈ ವೇಳೆ ದ್ವಿಶತಕದ ಭರವಸೆ ಮೂಡಿಸಿದ್ದ ಮಯಾಂಕ್, 150 ರನ್ ಪೂರೈಕೆ ಬೆನ್ನಲ್ಲೇ ಅಜಾಜ್ ಪಟೇಲ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಬೆನ್ನಲ್ಲೇ ಅರ್ಧಶತಕ ಸಿಡಿಸಿ ಅಕ್ಷರ್ ಪಟೇಲ್ ನಿರ್ಗಮಿಸಿದರೆ, ಜಯಂತ್ ಯಾದವ್ 12 ರನ್, ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರೊಂದಿಗೆ 325 ರನ್ಗಳಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ ಅಂತ್ಯವಾಡಿತು. ಇನ್ನೂ ಈ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾವನ್ನ ಕಾಡಿದ ಎದುರಾಳಿ ಸ್ಪಿನ್ನರ್ ಅಜಾಜ್, 10 ವಿಕೆಟ್ ಪಡೆದ ಸಾಧನೆ ಮಾಡಿದರು…
Innings Break!#TeamIndia all out for 325 in the first innings in the 2nd Test.
Scorecard – https://t.co/KYV5Z1jAEM #INDvNZ @Paytm pic.twitter.com/lN1QnMXrRo
— BCCI (@BCCI) December 4, 2021