ಮುಂಬೈ ತಂಡದ ನೂತನ ಕೋಚ್ ಆಗಿ, ಮಾಜಿ ಕ್ರಿಕೆಟಿಗ ಅಮೋಲ್‌ ಮುಜುಮ್ದಾರ್‌ ನೇಮಕಗೊಂಡಿದ್ದಾರೆ. ಮುಜುಮ್ದಾರ್ 2021-22ರ ಡೊಮೆಸ್ಟಿಕ್ ಸೀಸನ್​ನಲ್ಲಿ, ಮುಂಬೈ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂಬೈ ತಂಡದ ಕೋಚ್ ಹುದ್ದೆಗೇರಲು, ಅಮೋಲ್‌ ಮುಜುಮ್ದಾರ್‌ ಮತ್ತು ವಾಸೀಂ ಜಾಫರ್ ತೀವ್ರ ಪೈಪೋಟಿ ನಡೆಸಿದ್ರು. ಆದ್ರೆ ಕ್ರಿಕೆಟ್ ಇಂಪ್ರೂವ್​ಮೆಂಟ್ ಕಮಿಟಿ (CIC) ಚೇರ್ಮನ್, ಜತಿನ್ ಪರಂಜಪೆ, ನಿಲೇಶ್ ಕುಲಕರ್ಣಿ ಮತ್ತು ವಿನೋದ್ ಕಾಂಬ್ಳಿ, ಮುಜುಮ್ದಾರ್ ಹೆಸರನ್ನ ಅಂತಿಮಗೊಳಿಸಿದ್ರು. ಮತ್ತೊಂದೆಡೆ ಮಾಜಿ ಕ್ರಿಕೆಟಿಗರಾದ ಬಲ್ವಿಂದರ್ ಸಿಂಗ್ ಸಂಧು, ಸಾಯಿರಾಜ್ ಬಹುತುಳೆ ಸೇರಿದಂತೆ, ಒಟ್ಟು 9 ಮಂದಿ ಸಿಐಸಿ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.

 

The post ಮುಂಬೈ ತಂಡಕ್ಕೆ ಮಾಜಿ ಕ್ರಿಕೆಟಿಗ ಅಮೋಲ್‌ ಮುಜುಮ್ದಾರ್‌ ನೂತನ ಕೋಚ್ appeared first on News First Kannada.

Source: newsfirstlive.com

Source link