ಮುಂಬೈ ಕ್ರಿಕೆಟ್ ಅಸೋಸಿಯೇಷನ್​​ನಲ್ಲಿ​​ (MCA) ಖಾಲಿಯಾಗಿರುವ ಕೋಚ್​ ಹುದ್ದೆಗೆ ಭಾರೀ ಪೈಪೋಟಿ ನಡೆಯುತ್ತಿದೆ. ಇತ್ತೀಚೆಗಷ್ಟೇ ರಮೇಶ್ ಪೊವಾರ್ ಭಾರತ ಮಹಿಳಾ ಕ್ರಿಕೆಟ್​​ ತಂಡದ ಹೆಡ್​ಕೋಚ್​ ಆಗಿ ಆಯ್ಕೆಯಾಗಿದ್ದು, ಮುಂಬೈ ತಂಡದ ಕೋಚ್​​ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸದ್ಯ ತೆರವಾದ ಸ್ಥಾನಕ್ಕಾಗಿ ಮಾಜಿ ಕ್ರಿಕೆಟಿಗರಾದ ವಾಸೀಮ್​ ಜಾಫರ್ ಮತ್ತು ಅಮೋಲ್ ಮುಜುಂದಾರ್​​​ಕಣದಲ್ಲಿದ್ದಾರೆ.

ಜೊತೆಗೆ ಭಾರತದ ಮಾಜಿ ಸ್ಪಿನ್ನರ್ ಸಾಯಿರಾಜ್ ಬಹುತುಲೆ, ಮುಂಬೈ ಮಾಜಿ ಕೋಚ್ ಸುಲಕ್ಷನ್ ಕುಲಕರ್ಣಿ, ಪ್ರದೀಪ್ ಸುಂದರಂ, ನಂದನ್ ಫಡ್ನಿಸ್, ಉಮೇಶ್ ಪತ್ವಾಲ್ ಮತ್ತು ವಿನೋದ್ ರಾಘವಾನ್ ಸೇರಿದಂತೆ ಇತರೆ ಅರ್ಜಿದಾರರು ಕೂಡ ರೇಸ್​​​ನಲ್ಲಿದ್ದಾರೆ. ಕೋಚ್​ ಸ್ಥಾನಕ್ಕೆ ಅರ್ಜಿ ಕರೆಯುವುದಕ್ಕೂ ಮುನ್ನವೇ ಅಮೋಲ್ ಮುಜುಂದಾರ್ ಹೆಸರು ಮುನ್ನಲೆಗೆ ಬಂದಿತ್ತು. ಆದರೆ ಎಂಸಿಎ ಪ್ರಕ್ರಿಯೆಯ ಮೂಲಕವೇ ಕೋಚ್​ ಆಯ್ಕೆಗೆ ಮುಂದಾಗಿದೆ.

ಮುಜುಂದಾರ್ ಈ ಸ್ಥಾನಕ್ಕೆ ಮೊದಲ ಆಯ್ಕೆ ಇರಬಹುದು. ಆದರೆ ವಾಸೀಂ ಜಾಫರ್​ ದೇಶೀ ಕ್ರಿಕೆಟ್​​​​ನ​ ದಿಗ್ಗಜ. ದೇಶೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜಾಫರ್, ಕೋಚಿಂಗ್ ಕ್ಷೇತ್ರದಲ್ಲಿ ಉತ್ತಮ ಗೌರವವನ್ನೇ ಸಂಪಾದಿಸಿದ್ದಾರೆ.

 

The post ಮುಂಬೈ ತಂಡದ ಕೋಚ್ ಹುದ್ದೆಗೆ ಫೈಟ್- ಜಾಫರ್​, ಮುಜುಂದಾರ್​​ ಇಬ್ಬರಲ್ಲಿ ಯಾರಿಗೆ ಮಣೆ..? appeared first on News First Kannada.

Source: newsfirstlive.com

Source link