ಮುಂಬೈ: ತಾಜ್​​ಮಹಲ್​​ ಪ್ಯಾಲೇಸ್​ ಹೋಟೆಲ್​ಗೆ ಭದ್ರತೆ ಹೆಚ್ಚಿಸಿ, ಇಬ್ಬರು ಗನ್​ ಹಿಡಿದ ವ್ಯಕ್ತಿಗಳು ಹೋಟೆಲ್​ ಒಳಗೆ ನುಗ್ಗಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಫೋನ್ ಕಾಲ್ ಒಂದು ಬಂದಿದ್ದು ತಕ್ಷಣ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಈ ವೇಳೆ ಫೋನ್ ಮಾಡಿದ್ದು ಯಾರೆಂದು ಪರಿಶೀಲಿಸಿದಾಗ ಅದೊಂದು ನಕಲಿ ಕಾಲ್ ಆಗಿತ್ತು ಅಂತಾ ತಿಳಿದು ಬಂದಿದೆ.

14 ವರ್ಷ ಬಾಲಕನೋರ್ವ ಈ ರೀತಿ ನಕಲಿ ಕಾಲ್ ಮಾಡಿದ್ದಾನೆ ಎಂದು ಪೊಲೀಸರ ತನಿಖೆ ಬಳಿಕ ತಿಳಿದುಬಂದಿದೆ. ಈ ವಿಚಾರವಾಗಿ ಹುಡುಗನ ತಂದೆಯನ್ನು ಪ್ರಶ್ನಿಸಿದಾಗ ಈ ವಿಚಾರದ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಹುಡುಗ ಹಾಗೂ ತಂದೆಯನ್ನ ಪೊಲೀಸರು ಪ್ರಶ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅಂದ್ರೆ 2008 ರಲ್ಲಿ ಉಗ್ರರು ಇದೇ ತಾಜ್ ಹೋಟೆಲ್​ ಮೇಲೆ ದಾಳಿ ನಡೆಸಿ ಹಲವರನ್ನು ಕೊಂದುಹಾಕಿದ್ದರು.

The post ಮುಂಬೈ ಪೊಲೀಸರನ್ನೇ ಕ್ಷಣಕಾಲ ಬೆಚ್ಚಿಬೀಳಿಸಿದ 14 ರ ಹುಡುಗ.. ನಡೆದಿದ್ದೇನು..? appeared first on News First Kannada.

Source: newsfirstlive.com

Source link