ಮುಂಬೈ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹದಿಹರೆಯದ ಇಬ್ಬರು ಆರೋಪಿಗಳ ಬಂಧನ | Woman in Mumbai was allegedly gangraped by four persons two teens detained


ಮುಂಬೈ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹದಿಹರೆಯದ ಇಬ್ಬರು ಆರೋಪಿಗಳ ಬಂಧನ

ಪ್ರಾತಿನಿಧಿಕ ಚಿತ್ರ

ಮುಂಬೈ: ಮುಂಬೈನಲ್ಲಿ ಶನಿವಾರ ಮುಂಜಾನೆ ಮಹಿಳೆಯೊಬ್ಬರ ಮೇಲೆ ನಾಲ್ವರು ವ್ಯಕ್ತಿಗಳು  ಸಾಮೂಹಿಕ ಅತ್ಯಾಚಾರ(Gangrape) ಎಸಗಿದ್ದಾರೆ. ಇವರಲ್ಲಿ ಇಬ್ಬರು ಹದಿಹರೆಯದವರನ್ನು ಬಂಧಿಸಲಾಗಿದ್ದು, ಪೊಲೀಸರು ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ. ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಮಹಿಳೆ ಶನಿವಾರ ಮುಂಜಾನೆ 4.30 ರ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಒಬ್ಬ ಆರೋಪಿ ಸಂತ್ರಸ್ತೆಯ ಪರಿಚಿತನಾಗಿದ್ದ, ಆತ ಆಕೆಯನ್ನು ತಡೆದು ಯಾಕೆ ತಡವಾಗಿ ಹೋಗುತ್ತಿದ್ದಿ ಎಂದು ಕೇಳಿದ್ದನು. ಅವರಲ್ಲಿ ಒಬ್ಬ ಆಕೆಯಲ್ಲಿ ತನ್ನೊಂದಿಗೆ ಬರುವಂತೆ ಹೇಳಿ ಅವಳನ್ನು ಕೋಣೆಗೆ ಕರೆದೊಯ್ದು ಅಲ್ಲಿ ಆರೋಪಿಗಳು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದರು. ಅವಳು ಬೊಬ್ಬೆ ಹಾಕಿದಾಗ ಇತರರು ಸೇರಿಕೊಂಡರು. ಆಕೆಯ ಬಾಯಿ ಮುಚ್ಚಿ ತಪ್ಪಿಸಿಕೊಳ್ಳುವ ಮೊದಲು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು ,ಆಕೆಯ ಮತ್ತು ಸ್ಥಳೀಯ ಗುಪ್ತಚರ ನೀಡಿದ ವಿವರಣೆಯನ್ನು ಆಧರಿಸಿ, ಪೊಲೀಸರು ನಾಲ್ವರು ಆರೋಪಿಗಳ ಗುರುತುಗಳನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಿದ್ದಾರೆ.
ಇಬ್ಬರು ಹದಿಹರೆಯದವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕೃತ್ಯವೆಸಗಿ ದ ಮತ್ತಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ” ಎಂದು ಅಧಿಕಾರಿ ಹೇಳಿದರು.

TV9 Kannada


Leave a Reply

Your email address will not be published. Required fields are marked *