ಮುಂಬೈ: ಶಾರುಖ್ ಖಾನ್ ಬಂಗಲೆ ಮನ್ನತ್ ಸಮೀಪದ ಕಟ್ಟಡದಲ್ಲಿ ಬೆಂಕಿ; ಯಾವುದೇ ಅಪಾಯ ಇಲ್ಲ | Major fire broke at a building near Shah Rukh Khan’s Mannat in Mumbai


ಮುಂಬೈ: ಶಾರುಖ್ ಖಾನ್ ಬಂಗಲೆ ಮನ್ನತ್ ಸಮೀಪದ ಕಟ್ಟಡದಲ್ಲಿ ಬೆಂಕಿ; ಯಾವುದೇ ಅಪಾಯ ಇಲ್ಲ

ಕಟ್ಟಡದಲ್ಲಿ ಬೆಂಕಿ

ಬಾಂದ್ರಾದ (ಪಶ್ಚಿಮ) ಬ್ಯಾಂಡ್‌ಸ್ಟ್ಯಾಂಡ್ ರಸ್ತೆಯಲ್ಲಿರುವ 21 ಅಂತಸ್ತಿನ ಜೀವೇಶ್ ಕಟ್ಟಡದ 14 ನೇ ಮಹಡಿಯಲ್ಲಿ ರಾತ್ರಿ 7.46 ರ ಸುಮಾರಿಗೆ  ಬೆಂಕಿ ಕಾಣಿಸಿಕೊಂಡಿದೆ

ಮುಂಬೈ: ಬಾಲಿವುಡ್  ನಟ  ಶಾರುಖ್ ಖಾನ್ (Shah Rukh Khan) ಅವರ ಬಂಗಲೆ ‘ಮನ್ನತ್’  (Mannat)ಬಳಿಯ ಕಟ್ಟಡದಲ್ಲಿ ಸೋಮವಾರ ಭಾರಿ ಬೆಂಕಿ(Fire) ಕಾಣಿಸಿಕೊಂಡಿದೆ. ಬಾಂದ್ರಾದ (ಪಶ್ಚಿಮ) ಬ್ಯಾಂಡ್‌ಸ್ಟ್ಯಾಂಡ್ ರಸ್ತೆಯಲ್ಲಿರುವ 21 ಅಂತಸ್ತಿನ ಜೀವೇಶ್ ಕಟ್ಟಡದ 14 ನೇ ಮಹಡಿಯಲ್ಲಿ ರಾತ್ರಿ 7.46 ರ ಸುಮಾರಿಗೆ  ಬೆಂಕಿ ಕಾಣಿಸಿಕೊಂಡಿದೆ. ಪ್ರಸ್ತುತ ಎಂಟು ಅಗ್ನಿಶಾಮಕ ವಾಹನಗಳು ಮತ್ತು ಏಳು ಜಂಬೋ ಟ್ಯಾಂಕರ್‌ಗಳು ಸ್ಥಳದಲ್ಲಿದ್ದು, ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿ ನಂದಿಸಲು ಸುಮಾರು ಎರಡು ಗಂಟೆ ಬೇಕಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅಗ್ನಿಶಾಮಕ ದಳದ  ಅಧಿಕಾರಿಯ ಪ್ರಕಾರ,21 ಅಂತಸ್ತಿನ ಕಟ್ಟಡದ 14 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಹಂತ-II ಬೆಂಕಿ ಎಂದು ವರ್ಗೀಕರಿಸಲಾಗಿದೆ. ರಾತ್ರಿ 7.45ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಟು ಅಗ್ನಿಶಾಮಕ ವಾಹನಗಳು, ಏಳು ಜಂಬೋ ಟ್ಯಾಂಕರ್‌ಗಳು ಮತ್ತು ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಮುಂಬೈ ನಾಗರಿಕ ಸಂಸ್ಥೆ, ಅದಾನಿ ವಿದ್ಯುತ್ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *