ಬೆಂಗಳೂರು: ಹಳೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಎಂಬಂತೆ ಡ್ರಗ್ ಕೇಸ್ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಮಾಡೆಲ್ ವಂದನಾ ಜೈನ್ ದೂರಿನ್ವಯ ಕೋರ್ಟ್‍ನಿಂದ ಪಿಸಿಆರ್ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?
2019 ರಲ್ಲಿ ಲಾವೆಲಿ ರಸ್ತೆಯ ಕ್ಲಬ್‍ನಲ್ಲಿ ವಂದನಾ ಜೈನ್ ಸ್ನೇಹಿತನೊಂದಿಗೆ ಮಾತುಕತೆ ವೇಳೆ ಸಂಜನಾ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದಾರೆ. ಬಳಿಕ ವಂದನಾ ಮುಖಕ್ಕೆ ಮಧ್ಯ ಎರಚಿ ಸಂಜನಾ ಹಲ್ಲೆ ಮಾಡಿದ್ದಾರೆ. ಇದರಿಂದ ವಂದನಾ ಜೈನ್ ಕಣ್ಣಿಗೆ ಗಾಯವಾಗಿದೆ. ಘಟನೆ ಬಳಿಕ ಸಂಜನಾ ವಂದನಾಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿದ್ದಾರೆ

The post ಮುಖಕ್ಕೆ ಮದ್ಯ ಎರಚಿದ ಸಂಜನಾ ವಿರುದ್ಧ ಎಫ್‍ಐಆರ್ appeared first on Public TV.

Source: publictv.in

Source link